ಅತ್ತ ನಮ್ಮ ಸೈನಿಕರು ಚೀನಾದ ವಿರುದ್ಧ ಹೋರಾಡುತ್ತಿದ್ದರೆ, ಇತ್ತ ದೇಶದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ವಾಗ್ವಾದ ನಡೆಸುತ್ತಿವೆ. ಮೊನ್ನೆ ಭಾರತ – ಚೀನಾ ಗಡಿಯಲ್ಲಿ ನಡೆದ ಗಲಾಟೆ ಸಂಬಂಧ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಇದೀಗ ರಾಹುಲ್ ಗಾಂಧಿ ಹೇಳಿಕೆಗೆ ಬಿಜೆಪಿ ತಿರುಗೇಟು ನೀಡಿದೆ.
ಗಡಿಯಲ್ಲಿ ಶಸ್ತ್ರಾಸ್ತ್ರ ರಹಿತವಾಗಿ ಸೈನಿಕರನ್ನು ಗಡಿ ಕಾಯಲು ಹೇಳಿದ್ದು ಯಾಕೆ ಎಂದು ಸರ್ಕಾರವನ್ನು ಪ್ರಶ್ನೆ ಮಾಡಿದ್ದರು ರಾಹುಲ್. ಇದಕ್ಕೆ ಉತ್ತರಿಸಿರುವ ವಿದೇಶಾಂಗ ಸಚಿವ ಎಸ್. ಜೈಶಂಕರ್, ಸೈನಿಕರು ಎಂದಿಗೂ ಶಸ್ತ್ರಾಸ್ತ್ರ ರಹಿತವಾಗಿ ಗಡಿ ಕಾಯಲು ಹೋಗುವುದಿಲ್ಲ. ಮೊನ್ನೆಯೂ ಶಸ್ತ್ರಾಸ್ತ್ರಗಳು ಅವರ ಬಳಿಯೇ ಇದ್ದವು.
ಆದರೆ ತಕ್ಷಣಕ್ಕೆ ಶಸ್ತ್ರಾಸ್ತ್ರ ಬಳಸಬಾರದು ಎಂಬ ಪದ್ದತಿ ದೀರ್ಘ ಕಾಲದಿಂದ ಇದೆ. ಹಾಗಾಗಿ ಮಾತಿಗೆ ಇಳಿದಿದ್ದಾರೆ. ಆದರೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ಬಿಗುಡಾಯಿಸಿದೆ ಎಂದಿದ್ದಾರೆ. ಇನ್ನು ಸೈನಿಕರ ಸುರಕ್ಷತೆ ಬಗ್ಗೆ ದೇಶದಲ್ಲಿ ಕಾಂಗ್ರೆಸ್ – ಬಿಜೆಪಿ ನಡುವೆ ವಾಗ್ವಾದಗಳು ಮುಂದುವರೆದಿವೆ.