ಭೋಪಾಲ್ನ ಖಾಸಗಿ ಆಸ್ಪತ್ರೆಯೊಂದರಲ್ಲಿ ವೈದ್ಯರ ತಂಡ ಯುವತಿಯ ಹೊಟ್ಟೆಯಲ್ಲಿದ್ದ ಬರೋಬ್ಬರಿ 16 ಕೆಜಿ ತೂಕದ ಗಡ್ಡೆಯನ್ನ ಯಶಸ್ವಿಯಾಗಿ ತೆಗೆದಿದ್ದಾರೆ.
ಬರೋಬ್ಬರಿ 6 ಗಂಟೆಗಳ ಕಾಲ ನಡೆದ ಶಸ್ತ್ರ ಚಿಕಿತ್ಸೆ ಬಳಿಕ ವೈದ್ಯರು ಗಡ್ಡೆಯನ್ನ ಹೊಟ್ಟೆಯಿಂದ ತೆಗೆದಿದ್ದಾರೆ.
ಇನ್ನು ಈ ವಿಚಾರವಾಗಿ ಮಾಹಿತಿ ನೀಡಿದ ಆಸ್ಪತ್ರೆ ಮ್ಯಾನೇಜರ್ ದೇವೇಂದ್ರ ಚಂಡೋಲಿಯಾ, ಇದೊಂದು ಅಂಡಾಶಯದ ಗಡ್ಡೆಯಾಗಿದ್ದು ವೈದ್ಯರು ಗಡ್ಡೆ ತೆಗೆಯುವ ಶಸ್ತ್ರಚಿಕಿತ್ಸೆಯಲ್ಲಿ ಯಶಸ್ವಿಯಾಗಿದ್ದಾರೆ ಹಾಗೂ ಮಹಿಳೆ ಕೂಡ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ರು.
ಎರಡು ದಿನಗಳ ಹಿಂದೆ ರಾಜಗಢದಿಂದ 20 ವರ್ಷದ ಯುವತಿ ಆಸ್ಪತ್ರೆಗೆ ಆಗಮಿಸಿದ್ದರು. ಆಕೆಯ ಹೊಟ್ಟೆಯಲ್ಲಿ ದೊಡ್ಡ ಗಾತ್ರದ ಗಡ್ಡೆ ಇದ್ದಿದ್ದರಿಂದ ಆಕೆ ಆಹಾರ ಸೇವಿಸುವಾಗ ಹಾಗೂ ನಡೆದಾಡುವಾಗ ತುಂಬಾನೇ ಸಮಸ್ಯೆಯಾಗುತ್ತಿತ್ತು. ಇದೊಂದು ಅಂಡಾಶಯದ ಗಡ್ಡೆಯಾಗಿದ್ದು ಮಹಿಳೆಯ ತೂಕ 48 ಕೆಜಿ ಇದ್ದರೆ ಗಡ್ಡೆಯ ತೂಕ 16 ಕೆಜಿ ಇತ್ತು. ಇದೊಂದು ದೊಡ್ಡ ಸರ್ಜರಿ ಎಂದು ಚಂಡೋಲಿಯ ಹೇಳಿದ್ರು.