ಜಾರ್ಖಂಡ್ನ ಸಾಹಿಬ್ಗಂಜ್ ಜಿಲ್ಲೆಯ ರಂಗ ಪೊಲೀಸ್ ಠಾಣೆ ಪ್ರದೇಶದಲ್ಲಿ ತಲೆ ತಗ್ಗಿಸುವ ಘಟನೆ ನಡೆದಿದೆ. ಪ್ರೇಮಿಗಳ ಬಟ್ಟೆ ಬಿಚ್ಚಿ, ಬೆತ್ತಲಾಗಿ ಮೆರವಣಿಗೆ ಮಾಡಲಾಗಿದೆ. ಹಳ್ಳಿಯವರೊಬ್ಬರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಕ್ಕೆ ಹಾಕಿದ್ದಾರೆ.
ವಿವಾಹಿತ ಮಹಿಳೆಗೆ ಬೇರೆ ಯುವಕನ ಜೊತೆ ಸಂಬಂಧವಿತ್ತು. ರೈಲ್ವೆ ನಿಲ್ದಾಣದ ಬಳಿ ಇಬ್ಬರು ನೋಡಬಾರದ ಸ್ಥಿತಿಯಲ್ಲಿ ಸಿಕ್ಕಿಬಿದ್ದಿದ್ದಾರೆ. ಇದ್ರಿಂದ ಕೋಪಗೊಂಡ ಗ್ರಾಮಸ್ಥರು ಇಬ್ಬರಿಗೂ ಮನಸ್ಸಿಗೆ ಬಂದಂತೆ ಥಳಿಸಿದ್ದಾರೆ. ನಂತ್ರ ಬಟ್ಟೆ ಬಿಚ್ಚಿ, ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿದ್ದಾರೆ.
ವಿಷ್ಯ ಗೊತ್ತಾಗ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ. ಆದ್ರೆ ಪರಿಸ್ಥಿತಿ ನಿಯಂತ್ರಿಸಿ ಅವರನ್ನು ರಕ್ಷಿಸುವುದು ಸ್ವಲ್ಪ ಕಷ್ಟವಾಯ್ತೆಂದು ಪೊಲೀಸರು ಹೇಳಿದ್ದಾರೆ. ಗ್ರಾಮಸ್ಥರ ವಿರುದ್ಧ ಪ್ರಕರಣ ದಾಖಲಾಗಿದ್ದು, ವಿಚಾರಣೆ ನಡೆಯುತ್ತಿದೆ. ಸಿಕ್ಕಿಬಿದ್ದ ಯುವಕನಿಗೆ ಗ್ರಾಮಸ್ಥರು 5 ಲಕ್ಷ ರೂಪಾಯಿ ದಂಡ ವಿಧಿಸಿದ್ದಾರೆ.