ನವದೆಹಲಿ: ಕೊರೊನಾ ಲಸಿಕೆ ಲಭ್ಯವಾದ ಕೂಡಲೇ ಯಾರಿಗೆಲ್ಲ ಲಸಿಕೆ ಹಂಚಿಕೆ ಮಾಡಬೇಕು ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಮಹತ್ವದ ಮಾಹಿತಿ ನೀಡಿದ್ದು, ಒಟ್ಟು ನಾಲ್ಕು ಹಂತಗಳಲ್ಲಿ ಲಸಿಕೆ ಹಂಚಲು ಸಿದ್ಧತೆ ನಡೆಸಲಾಗಿದೆ.
ಮೊದಲ ಹಂತದಲ್ಲಿ 65 ವರ್ಷ ಮೇಲ್ಪಟ್ಟ 1 ಕೋಟಿ ಆರೋಗ್ಯ ಸಿಬ್ಬಂದಿಗಳಿಗೆ ಆಶಾಕಾರ್ಯಕರ್ತೆಯರಿಗೆ ಲಸಿಕೆ ಹಂಚಲಾಗುತ್ತದೆ. 2 ನೇ ಹಂತದಲ್ಲಿ ಪೊಲೀಸ್ , ಸೈನ್ಯ, ಪೌರಕಾರ್ಮಿಕರಿಗೆ ಕೋವಿಡ್ ಲಸಿಕೆ ನೀಡಲಾಗುತ್ತದೆ. 3ನೇ ಹಂತದಲ್ಲಿ 50 ವರ್ಷ ಮೇಲ್ಪಟ್ಟವರಿಗೆ ಹಾಗೂ ನಾಲ್ಕನೇ ಹಂತದಲ್ಲಿ 50 ವರ್ಷಕ್ಕಿಂತ ಕೆಳಗಿನ ಕ್ಯಾನ್ಸರ್, ಅಸ್ತಮಾ, ಮಧುಮೇಹ, ಹೃದಯ ಸಂಬಂಧಿ ಕಾಯಿಲೆ, ಕಿಡ್ನಿ ಸಮಸ್ಯೆ ಸೇರಿದಂತೆ ಇನ್ನಿತರ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಲಸಿಕೆ ನೀಡಲಾಗುತ್ತಿದೆ.
ಆರಂಭದಲ್ಲಿ ಕೊರೊನಾ ಸೋಂಕು ಬಂದವರಲ್ಲಿ ಲಸಿಕೆ ನೀಡಲು ಆದ್ಯತೆ ನೀಡಲಾಗುತ್ತದೆ. ನಂತರದ ಹಂತದಲ್ಲಿ ಕೊರೊನಾ ಸೋಂಕಿನಿಂದ ಗುಣಮುಖರಾದವರಿಗೆ ಹಾಗೂ ಇನ್ನೂ ಸೋಂಕು ಕಾಣಿಸಿಕೊಳ್ಳದವರಿಗೆ ಲಸಿಕೆ ನೀಡಲಾಗುತ್ತದೆ.