ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಅದರಲ್ಲೂ ಲಾಕ್‌ಡೌನ್ ಸಡಲಿಕೆ ಮಾಡಿದ ನಂತರವಂತೂ ಸೋಂಕಿತರ ಸಂಖ್ಯೆ ವಿಪರೀತ ಹೆಚ್ಚಾಗಿದೆ. ಲಕ್ಷಾಂತರ ಮಂದಿಗೆ ಸೋಂಕು ತಗುಲಿದ್ದು, ಸಾವಿರಾರು ಮಂದಿ ಸಾವನ್ನಪ್ಪಿದ್ದಾರೆ. ಸಡಿಲಿಕೆ ನಿರ್ಧಾರದ ಬಗ್ಗೆ ಸಾಕಷ್ಟು ವಿರೋಧ ಕೇಳಿ ಬಂದಿತ್ತಾದರೂ ಕೇಂದ್ರ ಸರ್ಕಾರ ಸಡಿಲಿಕೆ ಮಾಡಿತ್ತು. ಈ ವಿಚಾರವಾಗಿ ಇದೀಗ ರಾಹುಲ್ ಗಾಂಧಿ ಕಿಡಿ ಕಾರಿದ್ದಾರೆ.
ಹೌದು, ಈ ಬಗ್ಗೆ ಮಾತನಾಡಿರುವ ರಾಹುಲ್ ಗಾಂಧಿ ಕೊರೊನಾ ವಿಚಾರವಾಗಿ ಕೇಂದ್ರ ಸರ್ಕಾರ ಕೈ ಚೆಲ್ಲಿದೆ. ಇದು ಎಷ್ಟರ ಮಟ್ಟಿಗೆ ಸರಿ. ಆಯಾಯ ರಾಜ್ಯಗಳ ಮೇಲೆ ಎಲ್ಲಾ ಹೊಣೆ ಬಿಟ್ಟಿದೆ. ಲಾಕ್‌ಡೌನ್ ಸಡಿಲಿಕೆ ಮಾಡಿದ್ದೇ ಸೋಂಕು ಹೆಚ್ಚಾಗಲು ಕಾರಣ ಎಂದು ಹೇಳಿದ್ದಾರೆ.
ಲಾಕ್‌ಡೌನ್ ಸಡಿಲಿಕೆ ಬಳಿಕೆ ಸೋಂಕು ಹೆಚ್ಚಿರುವ ದೇಶ ಅಂದರೆ ಭಾರತ ಎಂದು ಹೇಳಿದ್ದಾರೆ ರಾಹುಲ್ ಗಾಂಧಿ. ಬಡವರು, ಮಧ್ಯಮ ವರ್ಗದವರ ಪರ ಸರ್ಕಾರ ಇರಬೇಕು. ಆದರೆ ಕೇಂದ್ರದ ನಡೆ ಹಾಗಿಲ್ಲ ಎಂದು ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.