ರಫೇಲ್ ಯುದ್ಧ ವಿಮಾನ ಇತ್ತೀಚೆಗೆ ಭಾರತದ ರಕ್ಷಣಾ ಪಡೆಗೆ ಸೇರಿದ್ದು ಗೊತ್ತೇ ಇದೆ. ಈ ಲೋಹದ ಹಕ್ಕಿಯ ಹಾರಾಟದ ಜೊತೆ ಇದೀಗ ಮತ್ತೊಂದು ಲೋಹದ ಹಕ್ಕಿ ಭಾರತಕ್ಕೆ ಎಂಟ್ರಿ ಕೊಟ್ಟಿದೆ. ಹೊಸದಾಗಿ ಬಂದ ಲೋಹದ ಹಕ್ಕಿಯ ಹಾರಾಟ ಭಾರತೀಯ ವಾಯುಪಡೆ ಪರ ಅಲ್ಲ. ಬದಲಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಪರ ಹಾರಾಟ ಮಾಡಲಿದೆ.
ಹೌದು, ರಾಷ್ಟ್ರಪತಿ, ಉಪ ರಾಷ್ಟ್ರಪತಿ ಮತ್ತು ಪ್ರಧಾನಿಯವರ ವಿದೇಶ ಪ್ರವಾಸಕ್ಕಾಗಿ ವಿಶೇಷ ವಿಮಾನ ಅಮೆರಿಕಾದಿಂದ ಬಂದಿಳಿದಿದೆ. ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಬೋಯಿಂಗ್ 777 ವಿಮಾನ ನಿನ್ನೆ ದೆಹಲಿ ತಲುಪಿದೆ. ಒಟ್ಟು 2 ವಿಮಾನಗಳು ಭಾರತಕ್ಕೆ ಬರುತ್ತವೆ ಎನ್ನಲಾಗಿತ್ತು. ಆದರೆ ಇದೀಗ ಒಂದು ವಿಮಾನ ಮಾತ್ರ ಬಂದಿಳಿದಿದ್ದು, ಮತ್ತೊಂದು ವಿಮಾನ ಶೀಘ್ರದಲ್ಲೇ ಬರಲಿದೆ.
ಹೊಸ ವಿಮಾನಕ್ಕೆ ಏರ್ ಇಂಡಿಯಾ ಒನ್ ಎಂದು ಹೆಸರಿಡಲಾಗಿದೆ. ಈ ವಿಮಾನಕ್ಕೆ ಭಾರತೀಯ ವಾಯುಪಡೆಯ ಪೈಲಟ್‌ಗಳೇ ಪೈಲಟ್‌ಗಳಾಗಲಿದ್ದಾರೆ. ಇನ್ನು ಈ ವಿಮಾನಗಳ ವೆಚ್ಚ 8400 ಕೋಟಿ ರೂಪಾಯಿಗಳು. ಒಟ್ಟಾರೆ ಹೊಸ ಅತ್ಯಾಧುನಿಕ ವಿಮಾನದ ಮೂಲಕ ಇಡೀ ಜಗತ್ತಿನ ಕಣ್ಣು ಭಾರತದ ಕಡೆ ಇದೆ.