ವಯಸ್ಸು 80ರ ಗಡಿ ದಾಟ್ತಿ ದ್ದಂತೆ ಜನರು ಮೋಕ್ಷ ಪ್ರಾಪ್ತಿಗೆ ಪುಣ್ಯ ಕೆಲಸ ಶುರು ಮಾಡ್ತಾರೆ. ಶಕ್ತಿಯಿರುವವರು ತೀರ್ಥ ಯಾತ್ರೆಗೆ ಹೋದ್ರೆ ಮತ್ತೆ ಕೆಲವರು ಗಂಗಾ ನದಿಯಲ್ಲಿ ಸ್ನಾನ ಮಾಡಿ ಮೋಕ್ಷಕ್ಕೆ ಪ್ರಾರ್ಥನೆ ಮಾಡ್ತಾರೆ. ಇನ್ನು ಕೆಲವರು ವಾರಣಾಸಿಯ ಕಾಶಿ ಲಬ್ದಿ ಮುಕ್ತಿ ಭವನಕ್ಕೆ ಬರ್ತಾರೆ.
ಹೌದು, ಇದು ಅನೇಕ ವರ್ಷಗಳಿಂದ ನಡೆದುಕೊಂಡು ಬಂದಿದೆ. ಮೋಕ್ಷ ಪಡೆಯಲು ಅನೇಕರು ಕಾಶಿ ಲಬ್ದಿ ಮುಕ್ತಿ ಭವನಕ್ಕೆ ಬರ್ತಾರೆ. ಕುಟುಂಬಸ್ಥರು ಅಲ್ಲಿ ತಂಗಿ ಆಪ್ತರ ಮೋಕ್ಷಕ್ಕೆ ಪ್ರಾರ್ಥನೆ ಮಾಡ್ತಾರೆ. ಕಾಶಿ ಲಬ್ದಿ ಮುಕ್ತಿ ಭವನದಲ್ಲಿ 12 ಕೋಣೆಯಿದೆ. ಒಂದು ಕಾಲದಲ್ಲಿ ಈ ಕೋಣೆ ತುಂಬಿರುತ್ತಿತ್ತು. ಕೋಣೆಗಾಗಿ ನಾಲ್ಕೈದು ದಿನ ಕಾಯಬೇಕಾಗಿತ್ತು. ಆದ್ರೆ ಇತ್ತೀಚಿನ ದಿನಗಳಲ್ಲಿ ಇಲ್ಲಿಗೆ ಬರುವವರ ಸಂಖ್ಯೆ ಕಡಿಮೆಯಾಗಿದೆ.
1958ರಲ್ಲಿ ಇದನ್ನು ಮೊದಲ ಬಾರಿ ಶುರು ಮಾಡಲಾಯ್ತು. ಇಲ್ಲಿ ತಂಗುವವರಿಗೆ ಯಾವುದೇ ಶುಲ್ಕ ವಿಧಿಸುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಸಂಖ್ಯೆ ಕಡಿಮೆಯಾಗಲು ಮಾನವ ಲೌಕಿಕ ಬಾಂಧವ್ಯದಿಂದ ಮುಕ್ತನಾಗಲು ಸಾಧ್ಯವಾಗದಿರುವುದು ಕಾರಣ ಎನ್ನಲಾಗ್ತಿದೆ. ಗೋ ದಾನ ಮಾಡಿ ಇಲ್ಲಿಗೆ ಬರುವ ವ್ಯಕ್ತಿ ಜೊತೆ ಇನ್ನೊಬ್ಬರು ಇರಬಹುದು. ಪ್ರತಿ ದಿನ ಒಬ್ಬರಿಗೆ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದು ಇಲ್ಲಿ ಸೇವೆ ಮಾಡುವವರು ಹೇಳ್ತಾರೆ. ರಾಮಾಯಣ, ಭಗವದ್ಗೀತೆ ಪಾಠ ನಡೆಯುತ್ತದೆ. ತುಳಸಿ ಹಾಗೂ ಗಂಗಾಜಲವನ್ನು ಪ್ರತಿ ದಿನ ನೀಡಲಾಗುತ್ತದೆ.