ಮೊಬೈಲ್ ಚಾರ್ಜಿಂಗ್ ವೇಳೆ ಮೊಬೈಲ್ ಸ್ಫೋಟಗೊಂಡ ಅನೇಕ ಘಟನೆಗಳು ನಡೆದಿವೆ. ತಮಿಳುನಾಡಿನಲ್ಲಿ ಈಗ ಮತ್ತೊಂದು ಘಟನೆ ನಡೆದಿದೆ. ಮೊಬೈಲ್ ಸ್ಫೋಟಕ್ಕೆ ತಾಯಿ-ಮಕ್ಕಳಿಬ್ಬರು ಸಾವನ್ನಪ್ಪಿದ್ದಾರೆ.
ಭಾನುವಾರ ರಾತ್ರಿ ಈ ಘಟನೆ ನಡೆದಿದೆ. ಮೊಬೈಲ್ ಚಾರ್ಜ್ ವೇಳೆ ಸ್ಫೋಟಗೊಂಡಿದೆ. ಇದ್ರಿಂದ ಮನೆಗೆ ಬೆಂಕಿ ಹತ್ತಿಕೊಂಡಿದೆ. ಮೂವರು ಬೆಂಕಿಗೆ ಆಹುತಿಯಾಗಿದ್ದಾರೆ. ರಾತ್ರಿ ಮಲಗಿದ್ದವರು ಬೆಂಕಿಗಾಹುತಿಯಾಗಿದ್ದಾರೆ. ಘಟನೆ ರಾತ್ರಿ ನಡೆದ ಕಾರಣ ಅಕ್ಕಪಕ್ಕದವರಿಗೆ ವಿಷ್ಯ ತಿಳಿಯಲಿಲ್ಲ ಎನ್ನಲಾಗಿದೆ.
ಮೃತಳು ಪತಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಳು ಎನ್ನಲಾಗಿದೆ. ಮಹಿಳೆ ಆಸ್ಪತ್ರೆಗೆ ಸಾಗಿಸುವ ಮೊದಲು ಸಾವನ್ನಪ್ಪಿದ್ರೆ ಮಕ್ಕಳು ಚಿಕಿತ್ಸೆ ವೇಳೆ ಸಾವನ್ನಪ್ಪಿದ್ದಾರೆ.