ವಿಶ್ವದಾದ್ಯಂತ ಕೊರೊನಾ ಲಸಿಕೆ ಪರೀಕ್ಷೆ ನಡೆಯುತ್ತಿದೆ. ಆಕ್ಸ್ ಫರ್ಡ್ ತಯಾರಿಸುತ್ತಿರುವ ಲಸಿಕೆ ಕೋವಿಕ್‌ಶೀಲ್ಡ್ ಪರೀಕ್ಷೆ ಭಾರತದ ಅನೇಕ ಕಡೆ ನಡೆಯುತ್ತಿದೆ. ಮಹಾರಾಷ್ಟ್ರದ ರಾಜಧಾನಿ ಮುಂಬೈನ ಕೆಇಎಂ ಆಸ್ಪತ್ರೆಯಲ್ಲಿ ಮಾನವ ಪ್ರಯೋಗ ಶುರುವಾಗಿದೆ. ಶನಿವಾರ ಮೂರು ಜನರ ಮೇಲೆ ಪ್ರಯೋಗ ಮಾಡಲಾಗ್ತಿದೆ.
ಕೆಇಎಂ ಆಸ್ಪತ್ರೆಯ ಡೀನ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಲಸಿಕೆಗಾಗಿ ಒಟ್ಟು 13 ಜನರನ್ನು ಪರೀಕ್ಷಿಸಲಾಗಿದೆ.ಇವರಲ್ಲಿ ಮೂವರನ್ನು ಪರೀಕ್ಷೆಗೆ ಆಯ್ಕೆ ಮಾಡಲಾಗಿದೆ ಎಂದು ಡೀನ್ ಹೇಳಿದ್ದಾರೆ. ಈ ಲಸಿಕೆಯನ್ನು ಆಕ್ಸ್ ಫರ್ಡ್-ಅಸ್ಟ್ರಾಜೆನೆಕಾ ತಯಾರಿಸುತ್ತಿದೆ.
ಇದ್ರ ಜೊತೆಗೆ ಇನ್ನೊಬ್ಬ ವ್ಯಕ್ತಿಗೆ ಪ್ಲೇಸ್‌ಬೊ ನೀಡಲಾಗುವುದು. ಈ ಲಸಿಕೆಯನ್ನು ಪುಣೆಯ ಸೀರಮ್ ಸಂಸ್ಥೆ ಅಭಿವೃದ್ಧಿಪಡಿಸಿದೆ.ಪ್ರಸಿದ್ಧ ಔಷಧೀಯ ಕಂಪನಿ ಜಾನ್ಸನ್ ಆಂಡ್ ಜಾನ್ಸನ್ ಈ ಹಿಂದೆ ಕೊರೊನಾ ವೈರಸ್ ಲಸಿಕೆಯ ಮೂರನೇ ಹಂತದ ಪ್ರಯೋಗವನ್ನು ಪ್ರಾರಂಭಿಸಿದ್ದಾಗಿ ಹೇಳಿಕೊಂಡಿದೆ.
ಲಸಿಕೆ, ಆರಂಭದಲ್ಲಿ ಉತ್ತಮ ಫಲಿತಾಂಶವನ್ನು ನೀಡಿದೆ. ಮೂರನೇ ಹಂತದಲ್ಲಿ 60,000 ಜನರಿಗೆ ಲಸಿಕೆ ಪರೀಕ್ಷಿಸಲಾಗುವುದು ಎಂದು ಕಂಪನಿ ತಿಳಿಸಿದೆ. ಇದಕ್ಕಾಗಿ ಯುಎಸ್ ಮತ್ತು ವಿಶ್ವದ ಇತರ 200 ಸ್ಥಳಗಳಲ್ಲಿ ಪರೀಕ್ಷೆ ನಡೆಯಲಿದೆ.