ಕೊರೊನಾ ವೈರಸ್ ಸೋಂಕು ದೇಶದಲ್ಲಿ ವೇಗವಾಗಿ ಹರಡುತ್ತಿದೆ. ಇದ್ರ ನಿಯಂತ್ರಣಕ್ಕೆ ಮಾಸ್ಕ್ ಕಡ್ಡಾಯವಾಗಿದೆ. ಮಾಸ್ಕ್ ಹಾಗೂ ಹ್ಯಾಂಡ್ ಗ್ಲೌಸ್ ಅನಿವಾರ್ಯವಾಗಿದೆ. ಆದ್ರೆ ಮಾಸ್ಕ್ ಹಾಗೂ ಹ್ಯಾಂಡ್ ಗ್ಲೌಸ್ ಎಸೆಯುವ ಬಗ್ಗೆ ಜನರಿಗೆ ಸರಿಯಾದ ಮಾಹಿತಿಯಿಲ್ಲ.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಕೊರೊನಾ ಸೋಂಕು ಇಲ್ಲದ ವ್ಯಕ್ತಿ ಮಾಸ್ಕ್ ಹಾಗೂ ಹ್ಯಾಂಡ್ ಗ್ಲೌಸ್ ಬಳಸುತ್ತಿದ್ದರೆ ಅದನ್ನು ಪೇಪರ್ ಬ್ಯಾಗ್ ನಲ್ಲಿ 72 ಗಂಟೆಗಳ ಕಾಲ ಇಡಬೇಕು. ನಂತ್ರ ಒಣಗಿದ ತ್ಯಾಜ್ಯಕ್ಕೆ ಅದನ್ನು ಹಾಕಬೇಕು. ಇದನ್ನು. ಕೋವಿಡ್ ವೇಸ್ಟ್ ಅಥವಾ ಜೈವಿಕ ವೈದ್ಯಕೀಯ ತ್ಯಾಜ್ಯವೆಂದು ಪರಿಗಣಿಸಲಾಗುವುದಿಲ್ಲ.
ಕೋವಿಡ್ ಸೋಂಕಿತರು ಮಾಸ್ಕ್ ಹಾಗೂ ಹ್ಯಾಂಡ್ ಗ್ಲೌಸ್ ನ್ನು ಪ್ರತ್ಯೇಕ ಮುಚ್ಚಿದ ಬಾಕ್ಸ್ ನಲ್ಲಿ ಹಾಕಬೇಕು. ಅದನ್ನು ಕೋವಿಡ್ ವೇಸ್ಟ್ ಎಂದು ಕರೆಯಲಾಗುತ್ತದೆ. ಕೋವಿಡ್ ವೇಸ್ಟ್ ತೆಗೆದುಕೊಂಡು ಹೋಗುವ ಮುನ್ಸಿಪಲ್ ಕಾರ್ಪೋರೇಷನ್ ಗೆ ನೀಡಬೇಕು. ಕೊರೊನಾ ಚಿಕಿತ್ಸೆಗೆ ಬಳಸುವ ಎಲ್ಲವೂ ಕೋವಿಡ್ ತ್ಯಾಜ್ಯವಲ್ಲ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ತನ್ನ ಮಾರ್ಗಸೂಚಿಯಲ್ಲಿ ಸ್ಪಷ್ಟಪಡಿಸಿದೆ. ಮಾಸ್ಕ್, ಗ್ಲೌಸ್, ಔಷಧಿಗಳು, ಸಿರಿಂಜ್, ಮೂತ್ರದ ಚೀಲಗಳು, ಬಳಸಿದ ಹತ್ತಿ, ಕೋವಿಡ್ ನಡುವಂಗಿಗಳನ್ನು ತ್ಯಾಜ್ಯವೆಂದು ಪರಿಗಣಿಸಲಾಗುತ್ತದೆ. ಔಷಧಿ ಪೆಟ್ಟಿಗೆ, ಹೊದಿಕೆಗಳು, ಹಣ್ಣಿನ ಸಿಪ್ಪೆಗಳು, ಜ್ಯೂಸ್ ಬಾಟಲ್ ಇತ್ಯಾದಿಗಳನ್ನು ಕೋವಿಡ್ ತ್ಯಾಜ್ಯವೆಂದು ಪರಿಗಣಿಸಲಾಗುವುದಿಲ್ಲ.