alex Certify ಮಹಿಳೆಯರು ತಮ್ಮ ʼಆ ದಿನʼಗಳಲ್ಲಿ ಲಸಿಕೆ ಪಡೆಯುವಂತಿಲ್ಲವೇ…? ಇಲ್ಲಿದೆ ವದಂತಿ ಹಿಂದಿನ ಅಸಲಿ ಸತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳೆಯರು ತಮ್ಮ ʼಆ ದಿನʼಗಳಲ್ಲಿ ಲಸಿಕೆ ಪಡೆಯುವಂತಿಲ್ಲವೇ…? ಇಲ್ಲಿದೆ ವದಂತಿ ಹಿಂದಿನ ಅಸಲಿ ಸತ್ಯ

ನವದೆಹಲಿ: ಕೊರೊನಾ ಎರಡನೇ ಅಲೆ ಅಟ್ಟಹಾಸಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ಈ ನಡುವೆ ಮೇ 1ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ವ್ಯಾಕ್ಸಿನ್ ನೀಡಲಾಗುತ್ತದೆ ಎಂದು ಕೇಂದ್ರ ಸರ್ಕಾರ ಘೋಷಿಸಿದೆ. ಆದರೆ ಈ ಮಧ್ಯೆ ಮಹಿಳೆಯರು ತಮ್ಮ ಋತುಸ್ರಾವದ ಸಮಯದ 5 ದಿನಗಳ ಕಾಲ ಲಸಿಕೆ ಪಡೆಯುವಂತಿಲ್ಲ ಎಂಬ ಸುದ್ದಿಯೊಂದು ಹಬ್ಬಿದೆ. ಇದು ಮಹಿಳೆಯರ ಗೊಂದಲಕ್ಕೆ ಕಾರಣವಾಗಿದೆ.

ಋತುಸ್ರಾವದ 5 ದಿನ ಮೊದಲು ಹಾಗೂ ಋತುಸ್ರಾವದ 5 ದಿನಗಳ ಕಾಲ ಕೊರೊನಾ ಲಸಿಕೆ ಪಡೆಯಬಾರದು ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿದೆ. ಹೀಗಾಗಿ ಮಹಿಳೆಯರು ಲಸಿಕೆ ಪಡೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಇದೀಗ ಈ ಗೊಂದಲಗಳಿಗೆ ತೆರೆ ಎಳೆದಿರುವ ಕೇಂದ್ರ ಆರೋಗ್ಯ ಇಲಾಖೆ, ಋತುಸ್ರಾವದ ದಿನಗಳಲ್ಲಿ ಮಹಿಳೆಯರು ಲಸಿಕೆ ಪಡೆಯಬಾರದು ಎಂಬ ಸುದ್ದಿ ಸುಳ್ಳು. ಲಸಿಕೆಗೂ ಋತುಸ್ರಾವಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದೆ.

ಮಂಗಳೂರು ಜೈಲಲ್ಲಿ ನಡೆದಿದೆ ನಡೆಯಬಾರದ ಘಟನೆ

ಮಹಿಳೆಯರಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಿರುತ್ತದೆ. ಕೊರೊನಾದಂತ ಈ ಸಂದರ್ಭದಲ್ಲಿ ಮೊದಲು ಮಹಿಳೆಯರು ಲಸಿಕೆ ಪಡೆದುಕೊಳ್ಳುವುದು ಮುಖ್ಯ, ಸುಳ್ಳು ಸುದ್ದಿಗಳಿಗೆ ಕಿವಿಗೊಡುವ ಅಗತ್ಯವಿಲ್ಲ. ಮಹಿಳೆಯರು ಯಾವಾಗ ಬೇಕಾದರೂ ಕೋವಿಡ್ ಲಸಿಕೆ ಪಡೆದುಕೊಳ್ಳಬಹುದು ಎಂದು ಸ್ಪಷ್ಟಪಡಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...