ಅಶಿಕ್ಷಿತರಿರಲಿ ಇಲ್ಲ ಶಿಕ್ಷಿತರಿರಲಿ ಬಹುತೇಕ ಮಹಿಳೆಯರಿಗೆ ಕಾನೂನಿನ ಬಗ್ಗೆ ಜ್ಞಾನವಿಲ್ಲ. ಇದ್ರಿಂದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಪ್ರತಿಯೊಬ್ಬ ಮಹಿಳೆಯೂ ತಮ್ಮ ಅನುಕೂಲಕ್ಕಿರುವ ಕಾನೂನನ್ನು ತಿಳಿದಿರಬೇಕಾಗುತ್ತದೆ.
ಗೌಪ್ಯತೆ ಹಕ್ಕು : ಮಹಿಳೆಯಾದವಳು ತನ್ನ ಜಿಲ್ಲೆಯ ಯಾವುದೇ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಬಹುದಾಗಿದೆ. ಹಾಗಾಗಿಯೇ ಪ್ರತಿ ಪೊಲೀಸ್ ಠಾಣೆಯಲ್ಲಿ ಮಹಿಳಾ ಪೊಲೀಸ್ ಅಧಿಕಾರಿಗಳಿರುತ್ತಾರೆ. ಮಹಿಳೆಯ ತಪಾಸಣೆಯನ್ನು ಕಡ್ಡಾಯವಾಗಿ ಮಹಿಳಾ ಪೊಲೀಸ್ ಸಿಬ್ಬಂದಿಯೇ ಮಾಡಬೇಕಾಗುತ್ತದೆ. ಮಹಿಳೆಯನ್ನು ಸೂರ್ಯೋದಯದ ಮೊದಲು ಹಾಗೂ ಸೂರ್ಯೋದಯದ ನಂತ್ರ ಬಂಧನ ಮಾಡುವಂತಿಲ್ಲ.
ಅತ್ಯಾಚಾರಕ್ಕೊಳಗಾದ ಮಹಿಳೆ ಹೇಳಿಕೆಯನ್ನು ಮ್ಯಾಜಿಸ್ಟ್ರೇಟ್ ಉಪಸ್ಥಿತಿಯಲ್ಲಿ ಪಡೆಯಬೇಕು. ಪೀಡಿತೆ ಬಯಸಿದ್ರೆ ಮಹಿಳಾ ಪೊಲೀಸ್ ಸಿಬ್ಬಂದಿ ಅವರ ಜೊತೆಗಿರಬಹುದು. ಪೊಲೀಸ್ ಠಾಣೆಯಲ್ಲೊಂದೇ ಅಲ್ಲ ಪೀಡಿತೆ ಮನೆಯಲ್ಲೂ ಆಕೆ ಹೇಳಿಕೆ ನೀಡಬಹುದಾಗಿದೆ.
ಮಹಿಳೆ ಜೊತೆ ಯಾವುದೇ ವ್ಯಕ್ತಿ ಕೆಟ್ಟದಾಗಿ ನಡೆದುಕೊಂಡಲ್ಲಿ ಮಹಿಳೆ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಬಹುದು. ಮಹಿಳೆ ದೂರನ್ನು ಪೊಲೀಸರು ದಾಖಲಿಸಿಕೊಳ್ಳಲು ನಿರಾಕರಿಸಿದ್ರೆ ಮಹಿಳೆ ನ್ಯಾಯಾಲಯಕ್ಕೆ ಅಥವಾ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಮನವಿ ಸಲ್ಲಿಸಿ ತನ್ನ ಹಕ್ಕನ್ನು ಪಡೆಯಬಹುದಾಗಿದೆ.
ಕೇಂದ್ರ ಸರ್ಕಾರ ಎಲ್ಲ ಕಾರ್ಮಿಕರಿಗೂ ಕನಿಷ್ಠ ವೇತನ ಘೋಷಣೆ ಮಾಡಿದೆ. ಕಚೇರಿ ಸಂಬಳದಲ್ಲಿ ಲಿಂಗ ಅಸಮಾನತೆ ಕಂಡು ಬಂದಲ್ಲಿ ಕಾರ್ಮಿಕ ಸಚಿವಾಲಯಕ್ಕೆ ದೂರು ಸಲ್ಲಿಸುವ ಹಕ್ಕು ಮಹಿಳೆಯರಿಗಿದೆ.
ಮಹಿಳೆಯರ ರಕ್ಷಣೆಗೆ ಸಂಬಂಧಿಸಿದಂತೆ ಅನೇಕ ಕಾನೂನು ಜಾರಿಯಲ್ಲಿದೆ. ಇದ್ರ ಬಗ್ಗೆ ಮಹಿಳೆಯರಿಗೆ ಸಾಮಾನ್ಯ ಜ್ಞಾನವಿದ್ರೆ ಅವ್ರ ಮೇಲೆ ನಡೆಯುವ ಹಲ್ಲೆ, ಶೋಷಣೆ ವಿರುದ್ಧ ಅವರೇ ಕಾನೂನು ಹೋರಾಟ ನಡೆಸಬಹುದಾಗಿದೆ.