ಜಾತಿಗಳನ್ನು ಸೂಚಿಸುವ ಹೆಸರಿನ ಹಳ್ಳಿಗಳು ಮಹಾರಾಷ್ಟ್ರ ರಾಜ್ಯದಲ್ಲಿ ಇವೆ. ಇದರಿಂದ ಜಾತಿ ಜಾತಿಯ ನಡುವೆ ಸಾಮರಸ್ಯ ಹಾಳಾಗೋದ್ರ ಜೊತೆಗೆ ವೈಮನಸ್ಸು ಹೆಚ್ಚಾಗುತ್ತದೆ ಎಂಬ ಕಾರಣಕ್ಕೆ ಅಂತಹ ಹಳ್ಳಿಗಳ ಹೆಸರು ಮರುನಾಮಕರಣಕ್ಕೆ ತೀರ್ಮಾನ ಮಾಡಿದೆ ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರ.
ಇಂತಹದೊಂದು ಐತಿಹಾಸಿಕ ನಿರ್ಧಾರಕ್ಕೆ ಉದ್ಧವ್ ಠಾಕ್ರೆ ಕೈ ಹಾಕಿದ್ದು, ಇದರಿಂದ ಸಮಾಜದಲ್ಲಿ ಅಸಮಾನತೆ ದೂರ ಮಾಡಬಹುದು ಎನ್ನಲಾಗಿದೆ. ಇನ್ನು ಜಾತಿ ಸೂಚಿಸುವ ಹಳ್ಳಿಗಳಿಗೆ ಸಮಾಜ ಸುಧಾರಕರ ಹೆಸರನ್ನು ಇಡಲಾಗುತ್ತದೆಯಂತೆ.
ಬ್ರಾಹ್ಮಣಪಾದ, ಧೋರ್‌ಪಾದ, ಮಾಲಿಗಲ್ಲಿ, ಮಹರ್ ಪಾದ ಹೀಗೆ ಸಾಕಷ್ಟು ಹಳ್ಳಿಗಳಲ್ಲಿ ಜಾತಿ ಸೂಚಿಸುವ ಹೆಸರಿವೆ. ಇದನ್ನು ಬದಲಾಯಿಸುವ ನಿರ್ಧಾರಕ್ಕೆ ಮಹಾರಾಷ್ಟ್ರ ಸರ್ಕಾರ ತೀರ್ಮಾನಿಸಿದೆ. ಸರ್ಕಾರದ ಈ ನಿಲುವು ಆಯಾಯ ಜಾತಿಯವರಿಗೆ ಒಪ್ಪಿಗೆಯಾಗುತ್ತಾ ಅನ್ನೋದು ಮುಂದಿನ ಪ್ರಶ್ನೆ.