
ಪಶ್ಚಿಮ ಬಂಗಾಳ ವಿಧಾನಸಭೆಗೆ ಚುನಾವಣೆ ನಡೆಯುತ್ತಿದ್ದು, ಈಗಾಗಲೇ ಒಂದು ಹಂತದ ಮತದಾನ ಮುಕ್ತಾಯಗೊಂಡಿದೆ. ಇಂದು ಎರಡನೇ ಹಂತದ ಮತದಾನ ನಡೆಯುತ್ತಿದ್ದು, ಈ ಪೈಕಿ ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸ್ಪರ್ಧಿಸಿರುವ ನಂದಿಗ್ರಾಮ ವಿಧಾನಸಭಾ ಕ್ಷೇತ್ರವೂ ಸಹ ಸೇರಿದೆ.
ಮಮತಾ ಬ್ಯಾನರ್ಜಿ ತಮ್ಮ ಸಾಂಪ್ರದಾಯಿಕ ಕ್ಷೇತ್ರವನ್ನು ಬಿಟ್ಟು ತಮ್ಮ ಒಂದು ಕಾಲದ ಆಪ್ತ, ಈಗ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಸುವೇಂದು ಅಧಿಕಾರಿಯವರನ್ನು ಮಣಿಸಲು ಅವರು ಪ್ರಾಬಲ್ಯ ಹೊಂದಿರುವ ನಂದಿಗ್ರಾಮದಲ್ಲಿ ಸ್ಪರ್ಧಿಸಿದ್ದಾರೆ.
ರೈತ ಸಮುದಾಯಕ್ಕೆ ಶಾಕಿಂಗ್ ನ್ಯೂಸ್: ಕೈಸೇರದ ಕಿಸಾನ್ ಸಮ್ಮಾನ್ 2 ನೇ ಕಂತು
ಹೀಗಾಗಿ ದೇಶದ ಜನತೆಯ ಚಿತ್ತ ಈಗ ನಂದಿಗ್ರಾಮದ ಚುನಾವಣೆಯತ್ತ ಇದ್ದು, ಮಮತಾ ಬ್ಯಾನರ್ಜಿ ತಮ್ಮ ಒಂದು ಕಾಲದ ಆಪ್ತ ಸುವೇಂದು ಅಧಿಕಾರಿಯವರನ್ನು ಪರಾಭವಗೊಳಿಸುತ್ತಾರಾ ಎಂಬ ಕುತೂಹಲ ಮೂಡಿದೆ. ಸಾರ್ವಜನಿಕರ ಈ ಪ್ರಶ್ನೆಗೆ ಮತ ಎಣಿಕೆ ದಿನ ಉತ್ತರ ದೊರೆಯಲಿದೆ.