alex Certify ಮನ್ ಕೀ ಬಾತ್: ಕೆ.ಸಿ. ಜನರಲ್ ಆಸ್ಪತ್ರೆ ನರ್ಸ್ ಸುರೇಖಾರೊಂದಿಗೆ ಪ್ರಧಾನಿ ಮೋದಿ ಮಾತು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನ್ ಕೀ ಬಾತ್: ಕೆ.ಸಿ. ಜನರಲ್ ಆಸ್ಪತ್ರೆ ನರ್ಸ್ ಸುರೇಖಾರೊಂದಿಗೆ ಪ್ರಧಾನಿ ಮೋದಿ ಮಾತು

ನವದೆಹಲಿ: ಕೊರೊನಾ ಎರಡನೇ ಅಲೆ ಅಬ್ಬರ ನಮ್ಮ ಧೈರ್ಯವನ್ನು ಕುಸಿಯುವಂತೆ ಮಾಡುತ್ತಿದೆ. ಆದರೆ ಭಯಪಡುವ ಅಗತ್ಯವಿಲ್ಲ. ದೇಶದಲ್ಲಿ ಒಂದನೇ ಅಲೆಯನ್ನು ನಿಭಾಯಿಸಿದ್ದೇವೆ ಇದರಿಂದಾಗಿ ನಮ್ಮಲ್ಲಿ ಆತ್ಮಸ್ಥೈರ್ಯವಿದೆ. ಈಗಾಗಲೇ ಲಸಿಕೆ ನೀಡಿಕೆಯ ವೇಗಕೂಡ ಹೆಚ್ಚಿದೆ ಲಸಿಕೆ ಬಗ್ಗೆ ಊಹಾಪೋಹದ ಸುದ್ದಿ ಬಗ್ಗೆ ಕಿವಿಗೊಡಬೇಡಿ ಎಂದು ಪ್ರಧಾನಿ ಮೋದಿ ತಿಳಿಸಿದರು.

ಮನ್ ಕೀ ಬಾತ್ ರೇಡಿಯೋ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಲಸಿಕೆ ಬಗ್ಗೆ ಹರಡುವ ಯಾವುದೇ ವದಂತಿಗಳಿಗೆ ಗಮನಕೊಡಬೇಡಿ. ಮೇ 1ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಲಾಗುವುದು. ಉಚಿತ ಲಸಿಕೆ ಅಭಿಯಾನ ಕಾರ್ಯಕ್ರಮ ಜಾರಿಯಲ್ಲಿದೆ. ರಾಜ್ಯ ಸರ್ಕಾರಗಳು ಉಚಿತ ಲಸಿಕೆ ಜನರಿಗೆ ತಲುಪಿಸುವ ವ್ಯವಸ್ಥೆ ಮಾಡಬೇಕು. ಉಚಿತ ಲಸಿಕೆ ಮುಂದುವರೆಯಲಿದೆ. ಇದರಲ್ಲಿ ಕಾರ್ಪೊರೇಟ್ ಕಂಪನಿಗಳು ಭಾಗಿಯಾಗಬೇಕು ಎಂದು ಕರೆ ನೀಡಿದರು.

ಮಹಿಳೆಯರು ತಮ್ಮ ʼಆ ದಿನʼಗಳಲ್ಲಿ ಲಸಿಕೆ ಪಡೆಯುವಂತಿಲ್ಲವೇ…? ಇಲ್ಲಿದೆ ವದಂತಿ ಹಿಂದಿನ ಅಸಲಿ ಸತ್ಯ

ಕೊರೊನಾ ವೈರಸ್ ಬಗ್ಗೆ ಹಲವು ವೈದ್ಯರು, ವೈದ್ಯಕೀಯ ಸಿಬ್ಬಂದಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ ಎಂದರು. ಇದೇ ವೇಳೆ ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆ ನರ್ಸ್ ಸುರೇಖಾ ಅವರಿಗೆ ಕರೆ ಮಾಡಿದ ಪ್ರಧಾನಿ ಅವರೊಂದಿಗೆ ಮಾತನಾಡಿದ್ದಾರೆ. ಯಾರಲ್ಲಾದರೂ ಕೊರೊನಾ ಸೋಂಕಿನ ಲಕ್ಷಣ ಕಂಡುಬಂದರೆ ಐಸೋಲೇಟ್ ಆಗಿ ಚಿಕಿತ್ಸೆ ಪಡೆಯಿರಿ. ಲಸಿಕೆ ಪಡೆದುಕೊಳ್ಳುವ ಬಗ್ಗೆ ಯಾವುದೇ ಭಯ ಬೇಡ. ಯಾವುದೇ ಲಸಿಕೆ ತಕ್ಷಣ ಪರಿಣಾಮಗಳನ್ನು ಬೀರುವುದಿಲ್ಲ. ಅದು ನಮ್ಮಲ್ಲಿರುವ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಸುರೇಖಾ ತಿಳಿಸಿದ್ದಾರೆ.

ಇದೇ ವೇಳೆ ಮುಂಬೈನ ಡಾ.ಶಶಾಂಕ್ ಅವರೊಂದಿಗೂ ಮಾತನಾಡಿದ್ದು, ಎರಡನೇ ಅಲೆ ಮೊದಲ ಅಲೆಗಿಂತ ವೇಗವಾಗಿ ಹರಡುತ್ತೆ. ಗುಡ್ ನ್ಯೂಸ್ ಅಂದ್ರೆ ಗುಣಮುರಾಗುತ್ತಿರುವವರ ಪ್ರಮಾಣ ಹೆಚ್ಚಿದೆ. ರೂಪಾಂತರಿ ವೈರಸ್ ಜನರು ಬಟ್ಟೆ ಬದಲಿಸಿದಂತೆ ವೈರಸ್ ಬದಲಾಗುತ್ತದೆ. ಆದರೆ ಆತಂಕ ಬೇಡ. ಮೈಲ್ಡ್, ಮಧ್ಯಮ, ತೀವ್ರ ಎಂದು ಕೋವಿಡ್ ನಲ್ಲಿ 3 ವಿಧ. ರೆಮ್ ಡಿಸಿವಿರ್ ಹಿಂದೆ ಓಡುವ ಅಗತ್ಯವಿಲ್ಲ. ಪ್ರಾಣಾಯಾಮದಿಂದಲೂ ಉಸಿರಾಟದ ಸಮಸ್ಯೆ ಪರಿಹರಿಸಿಕೊಳ್ಳಬಹುದು ಎಂದು ಹೇಳಿದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...