alex Certify ಮನೆಯವರಿಗೆ ನಿದ್ರೆ ಮದ್ದು ನೀಡಿ ಸೊಸೆ ಜೊತೆ ಕಾಲ್ಕಿತ್ತ ಮಾವ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯವರಿಗೆ ನಿದ್ರೆ ಮದ್ದು ನೀಡಿ ಸೊಸೆ ಜೊತೆ ಕಾಲ್ಕಿತ್ತ ಮಾವ

ಮಾವ-ಸೊಸೆಯ ಪವಿತ್ರ ಸಂಬಂಧಕ್ಕೆ ಕಳಂಕ ತರುವ ಘಟನೆ ಪಾಣಿಪತ್ ನಲ್ಲಿ ನಡೆದಿದೆ. ಮಗನ ಪತ್ನಿ ಜೊತೆ ತಂದೆ ಪರಾರಿಯಾದ ಘಟನೆ ಬೆಳಕಿಗೆ ಬಂದಿದೆ. 10 ತಿಂಗಳ ಮಗುವಿನ ಜೊತೆ ಸೊಸೆ ಪರಾರಿಯಾಗಿದ್ದಾಳೆ.

ಸಿಸಿ ಟಿವಿಯಲ್ಲಿ ಇವರ ಕೃತ್ಯ ಬಯಲಾಗಿದೆ. ರಾತ್ರಿ 11 ಗಂಟೆ ಸುಮಾರಿಗೆ ಇವರು ಮನೆ ಬಿಟ್ಟಿದ್ದಾರೆಂದು ಪೊಲೀಸರು ಹೇಳಿದ್ದಾರೆ. ಮನೆಯವರಿಗೆ ನಿದ್ರೆ ಮಾತ್ರೆ ತಿನ್ನಿಸಿ ಪರಾರಿಯಾಗಿದ್ದಾರೆ. ಪತ್ನಿ ಹಾಗೂ ತಂದೆ ಜೊತೆ ಇಂಥ ಸಂಬಂಧವಿದೆ ಎಂಬುದು ನನ್ನ ಅರಿವಿಗೆ ಬರಲಿಲ್ಲವೆಂದು ಮಗ ಹೇಳಿದ್ದಾನೆ.

ಸೊಸೆಗೆ ಇದು ಎರಡನೇ ಮಗು. ಮೊದಲ ಮಗನನ್ನು ಮನೆಯಲ್ಲೇ ಬಿಟ್ಟು ಹೋಗಿದ್ದಾಳೆ. ಮಾವ-ಸೊಸೆ ಮಧ್ಯೆ ಒಮ್ಮೆ ಜಗಳ ನಡೆದಿತ್ತು ಎಂದು ಅತ್ತೆ ಹೇಳಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪತ್ತೆ ಕಾರ್ಯ ಶುರು ಮಾಡಿದ್ದಾರೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...