ಚಿನ್ನದ ಬೆಲೆಯಲ್ಲಿ ದಾಖಲೆಯ ಮಟ್ಟದಲ್ಲಿ ಏರಿಕೆ ಕಾಣ್ತಿದೆ. ದೇಶದಲ್ಲಿ ಮೊದಲ ಬಾರಿಗೆ 10 ಗ್ರಾಂ ಚಿನ್ನದ ಬೆಲೆ 51 ಸಾವಿರ ರೂಪಾಯಿಗಳ ಗಡಿ ದಾಟಿದೆ. ಈ ಪರಿಸ್ಥಿತಿಯಲ್ಲಿ ದೊಡ್ಡ ಮಟ್ಟದಲ್ಲಿ ಲಾಭ ಪಡೆಯುವ ಅವಕಾಶ ನಿಮಗೆ ಸಿಗ್ತಿದೆ. ಗೋಲ್ಡ್ ಇಟಿಎಫ್ ನಲ್ಲಿ ನೀವು ಗಳಿಕೆ ಮಾಡಬಹುದಾಗಿದೆ.
ಸದ್ಯ ಸ್ಥಿರ ಠೇವಣಿ ( ಎಫ್ ಡಿ) ಗಳ ಮೇಲಿನ ಆದಾಯ ತೀವ್ರವಾಗಿ ಕಡಿಮೆಯಾಗಿದೆ. ಕಳೆದ ಮೂರು ತಿಂಗಳಲ್ಲಿ ಒಂದು ವರ್ಷದ ಎಫ್‌ಡಿಗಳ ಬಡ್ಡಿದರಗಳು ಶೇಕಡಾ 5ರಷ್ಟು ಇಳಿದಿವೆ. ಗೋಲ್ಡ್ ಇಟಿಎಫ್ ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡಿ ಶೇಕಡಾ 40ರಷ್ಟು ಆದಾಯವನ್ನು ಪಡೆಯಬಹುದಾಗಿದೆ. ತಜ್ಞರ ಪ್ರಕಾರ ಪ್ರಸ್ತುತ ಚಿನ್ನದ ಬೆಲೆಗಳು ನಿರಂತರವಾಗಿ ಏರಿಕೆ ಕಾಣಲಿವೆ. ಈ ವೇಳೆ ಚಿನ್ನದ ಇಟಿಎಫ್‌ಗಳಲ್ಲಿ ಹೂಡಿಕೆ ಮಾಡುವ ಮೂಲಕ ದೊಡ್ಡ ಆದಾಯವನ್ನು ಗಳಿಸಬಹುದಾಗಿದೆ.
ಅಂತರರಾಷ್ಟ್ರೀಯ ಮಟ್ಟದಲ್ಲಿ ಚಿನ್ನವು 9 ವರ್ಷಗಳ ಉತ್ತುಂಗದಲ್ಲಿ ವಹಿವಾಟು ನಡೆಸುತ್ತಿದೆ. ಯುಎಸ್-ಚೀನಾ ಉದ್ವಿಗ್ನತೆಯಿಂದಾಗಿ ಚಿನ್ನದ ದರ ಹೆಚ್ಚಾಗ್ತಿದೆ. ಯುರೋಪಿಯನ್ ಯೂನಿಯನ್ 2 ಟ್ರಿಲಿಯನ್ ಡಾಲರ್ ಪರಿಹಾರ ಪ್ಯಾಕೇಜ್ ಘೋಷಿಸಿದೆ. ಅಮೆರಿಕದಲ್ಲಿ ಹೆಚ್ಚಿನ ಪರಿಹಾರ ಪ್ಯಾಕೇಜ್‌ಗಳ ನಿರೀಕ್ಷೆಯಿದೆ. ಆರ್ಥಿಕತೆಯ ಬೆಳವಣಿಗೆಯ ಬಗ್ಗೆ ಚಿಂತಿಸುತ್ತಿರುವ ಈ ಸಮಯದಲ್ಲಿ ಚಿನ್ನದಲ್ಲಿ ಹೂಡಿಕೆ ಮಾಡುವುದು ಪ್ರಯೋಜನಕಾರಿಯಾಗಿದೆ ಎಂದು ತಜ್ಞರು ಹೇಳ್ತಿದ್ದಾರೆ. ವರ್ಷಾಂತ್ಯದ ವೇಳೆಗೆ ಚಿನ್ನವು 1900 ಡಾಲರ್ ತಲುಪುವ ಸಾಧ್ಯತೆಯಿದೆ.
ದೀಪಾವಳಿ ವೇಳೆಗೆ ಭಾರತದಲ್ಲಿ ಚಿನ್ನದ ದರ 55 ಸಾವಿರ ಗಡಿ ದಾಟುವ ಸಾಧ್ಯತೆಯಿದೆ. ಈ ಸಂದರ್ಭದಲ್ಲಿ ಗೋಲ್ಡ್ ಇಟಿಎಫ್ ನಲ್ಲಿ ಹಣ ಹೂಡಿಕೆ ಮಾಡಬಹುದು. ಐಸಿಐಸಿಐ ಪಿಆರ್‌ಯು ಗೋಲ್ಡ್ ಇಟಿಎಫ್ ಒಂದು ತಿಂಗಳಲ್ಲಿ ಶೇಕಡಾ 3.90ರಷ್ಟು, 3 ತಿಂಗಳಲ್ಲಿ ಶೇಕಡಾ 4.90ರಷ್ಟು ಮತ್ತು 6 ತಿಂಗಳಲ್ಲಿ ಶೇಕಡಾ 23.30ರಷ್ಟು ಮತ್ತು 1 ವರ್ಷಕ್ಕೆ ಶೇಕಡಾ 38.60ರಷ್ಟು ರಿಟರ್ನ್ ಸಿಗಲಿದೆ. ಎಚ್‌ಡಿಎಫ್‌ಸಿ ಗೋಲ್ಡ್ ಫಂಡ್ ಒಂದು ತಿಂಗಳಲ್ಲಿ ಶೇಕಡಾ 3.70, 3 ತಿಂಗಳಲ್ಲಿ ಶೇಕಡಾ 4.40 ಮತ್ತು 6 ತಿಂಗಳಿಗೆ ಶೇಕಡಾ 25.30ರಷ್ಟು ಮತ್ತು 1 ವರ್ಷಕ್ಕೆ ಶೇಕಡಾ 40.88 ರಿಟರ್ನ್ ಸಿಗಲಿದೆ.
ಕೊಟಕ್ ಗೋಲ್ಡ್ ಫಂಡ್ ಒಂದು ತಿಂಗಳಲ್ಲಿ ಶೇಕಡಾ 3.60 ಶೇಕಡಾ, 3 ತಿಂಗಳಿಗೆ ಶೇಕಡಾ 4.70, 6 ತಿಂಗಳಲ್ಲಿ 24.98 ಮತ್ತು 1 ವರ್ಷಕ್ಕೆ ಶೇಕಡಾ 41.60 ರಿಟರ್ನ್ ಸಿಗಲಿದೆ.
ನಿಪ್ಪಾನ್ ಗೋಲ್ಡ್ ಇಟಿಎಫ್ ತಿಂಗಳಲ್ಲಿ ಶೇಕಡಾ 4, 3 ತಿಂಗಳಿಗೆ ಶೇಕಡಾ 5.16, 6 ತಿಂಗಳಲ್ಲಿ ಶೇಕಡಾ 24 ಮತ್ತು 1 ವರ್ಷಕ್ಕೆ ಶೇಕಡಾ 39.50 ರಷ್ಟು ರಿಟರ್ನ್ ಸಿಗಲಿದೆ.
ಗೋಲ್ಡ್ ಇಟಿಎಫ್ ಒಂದು ರೀತಿಯ ಮ್ಯೂಚುವಲ್ ಫಂಡ್ ಆಗಿದ್ದು, ಅದು ಚಿನ್ನದಲ್ಲಿ ಹೂಡಿಕೆ ಮಾಡುತ್ತದೆ. ಯಾವುದೇ ಷೇರು ದಲ್ಲಾಳಿಯೊಂದಿಗೆ ಡಿಮ್ಯಾಟ್ ಖಾತೆಯನ್ನು ತೆರೆಯಬಹುದು. ಎಸ್‌ಐಪಿ ಮೂಲಕ ಚಿನ್ನವನ್ನು ನಿಯಮಿತವಾಗಿ ಖರೀದಿಸಬಹುದು. ಒಂದು ಗ್ರಾಂ ಚಿನ್ನವನ್ನು ಸಹ ಖರೀದಿಸಬಹುದು.