ಭಾರತದಲ್ಲಿ ಮದ್ಯಪಾನಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಮದ್ಯಪಾನಕ್ಕೆ ಎಷ್ಟು ಬೇಡಿಕೆ ಇದೆ ಎಂಬುದು ಲಾಕ್ ಡೌನ್ ಸಂದರ್ಭದಲ್ಲಿ ಗೊತ್ತಾಗಿದೆ. ಲಾಕ್ ಡೌನ್ ಮುಗಿಯುತ್ತಿದ್ದರೆ ಜನರು ಮದ್ಯಪಾನ ಖರೀದಿಗೆ ಮುಗಿಬಿದ್ದಿದ್ದರು. ಭಾರತೀಯರ ಈ ವ್ಯಸನ ಅವ್ರ ಆರೋಗ್ಯದ ಮೇಲೆ ಪರಿಣಾಮ ಬೀರ್ತಿದೆ.
ಏಮ್ಸ್ ಈ ಬಗ್ಗೆ ಸರ್ವೆಯೊಂದನ್ನು ಮಾಡಿದೆ. ಇದ್ರಲ್ಲಿ ಯಾವ ರಾಜ್ಯದ ಜನರು ಹೆಚ್ಚು ಮದ್ಯಪಾನ ಮಾಡ್ತಾರೆ ಎಂಬ ಮಾಹಿತಿ ನೀಡಲಾಗಿದೆ. ಪಂಜಾಬ್, ಗೋವಾ, ತ್ರಿಪುರಾ, ಛತ್ತೀಸ್ಗಡ, ಅರುಣಾಚಲ ಪ್ರದೇಶದಲ್ಲಿ ಮದ್ಯಪಾನಿಗಳ ಸಂಖ್ಯೆ ಹೆಚ್ಚಿದೆ. ಈ ಪಟ್ಟಿಯಲ್ಲಿ ಉತ್ತರ ಪ್ರದೇಶವೂ ಸ್ಥಾನ ಪಡೆದಿದೆ.
ಸರ್ವೆ ನಂತ್ರ ಅತಿ ಹೆಚ್ಚು ಮದ್ಯಪಾನ ಮಾಡುವ ನಾಲ್ಕು ರಾಜ್ಯಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ. ಪಟ್ಟಿಯಲ್ಲಿ ತಮಿಳುನಾಡು ಮೊದಲ ಸ್ಥಾನದಲ್ಲಿದೆ. ಮದ್ಯವ್ಯಸನಿಗಳ ಸಂಖ್ಯೆ ಇಲ್ಲಿ ಅತಿ ಹೆಚ್ಚಿದೆ. ಎರಡನೇ ಸ್ಥಾನದಲ್ಲಿ ಹರಿಯಾಣಾ ಇದೆ. ಮೂರನೇ ಸ್ಥಾನದಲ್ಲಿ ಮಹಾರಾಷ್ಟ್ರವಿದೆ. ನಾಲ್ಕನೇ ಸ್ಥಾನದಲ್ಲಿ ಉತ್ತರ ಪ್ರದೇಶವಿದೆ.