ಕೊರೊನಾದಿಂದಾಗಿ ಜನ ಬೇಸತ್ತು ಹೋಗಿದ್ದಾರೆ. ನಮ್ಮ ದೇಶದಿಂದ ಕೊರೊನಾ ಯಾವಾಗ ಹೋಗುತ್ತಪ್ಪಾ..? ಇದರಿಂದ ಯಾವಾಗ ನಾವು ಮುಕ್ತರಾಗುತ್ತೇವೋ ಎಂಬುದನ್ನು ಎಲ್ಲರು ಅಂದುಕೊಳ್ಳುತ್ತಲೇ ಇದ್ದಾರೆ. ಆದರೆ ಕೊರೊನಾ ಮಹಾಮಾರಿ ಮಾತ್ರ ಇಲ್ಲಿಂದ ತೊಲಗುತ್ತಿಲ್ಲ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಇದರ ಮಧ್ಯೆ ಕಾರ್ಯಕ್ರಮಗಳು ಕೂಡ ನಡೆಯುತ್ತಲೇ ಇವೆ.
ಕೊರೊನಾ ಭೀತಿಯ ನಡುವೆಯೇ ಮದುವೆಗಳು ಕೂಡ ನಡೆಯುತ್ತಿವೆ. ಇದರ ಮಧ್ಯೆ, ಆಂಧ್ರಪ್ರದೇಶದ ಮುದ್ದಿನೆಪಲ್ಲಿ ಗ್ರಾಮದಲ್ಲಿ ನಡೆದ ಮದುವೆಯಲ್ಲಿ ಬಂದ ಅತಿಥಿಗಳಿಗೆ ಅಡುಗೆಯವರು ವಿಶೇಷವಾಗಿ ಊಟ ಬಡಿಸಿದ್ದಾರೆ. ಈ ವಿಡಿಯೋ ಇದೀಗ ಫುಲ್ ವೈರಲ್ ಆಗಿದೆ.
ಹೌದು, ಈ ಮದುವೆಯಲ್ಲಿ ಅಡುಗೆಯವರು ಪಿಪಿಇ ಕಿಟ್ ಧರಿಸಿ ಊಟ ಬಡಿಸಿದ್ದಾರೆ. ಬಂದ ಅತಿಥಿಗಳ ಆರೋಗ್ಯ ದೃಷ್ಟಿಯಿಂದ ಆ ಮದುವೆಯಲ್ಲಿ 12 ಮಂದಿ ಅಡುಗೆಯವರು ಪಿಪಿಇ ಕಿಟ್ ಧರಿಸಿ ಊಟ ಬಡಿಸಿದ್ದಾರೆ. ಹಾಗೂ ಊಟದ ಸರತಿ ಸಾಲಿನಲ್ಲಿ ಕೂಡ ದೈಹಿಕ ಅಂತರ ಇರುವಂತೆ ಕೇಟರರ್ಸ್ ಟೇಬಲ್‌ಗಳನ್ನು ಜೋಡಿಸಿದ್ದಾರೆ. ಕಾರ್ಯಕ್ರಮ ಮುಗಿದ ನಂತರ ಆ ಪಿಪಿಇ ಕಿಟ್‌ಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗಿದೆಯಂತೆ.