alex Certify ಮಣ್ಣಲ್ಲಿ ಮಣ್ಣಾದ ಗಾನ ಗಾರುಡಿಗ SPB | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಣ್ಣಲ್ಲಿ ಮಣ್ಣಾದ ಗಾನ ಗಾರುಡಿಗ SPB

ಚೆನ್ನೈ: ನಿನ್ನೆ ವಿಧಿವಶರಾಗಿರುವ ಗಾನ ಗಾರುಡಿಗ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಅಂತ್ಯಕ್ರಿಯೆ ಚೆನ್ನೈನ ತಾಮರೈ ಪಾಕಂ ನಲ್ಲಿರುವ ತೋಟದ ಮನೆಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.

ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯ ತಾಮರಪಾಕಂ ನ ರೆಡ್ ಹಿಲ್ಸ್ ಫಾರ್ಮ್ ನಲ್ಲಿ ಎಸ್.ಪಿ.ಬಿ. ಅಂತ್ಯಕ್ರಿಯೆ ಶೈವ ಆರಾಧ್ಯ ಸಂಪ್ರದಾಯದಂತೆ ನಡೆಯಿತು. ಹೈದರಾಬಾದ್ ನ ಪುರೋಹಿತರ ಮಾರ್ಗದರ್ಶನದಲ್ಲಿ ಎಸ್.ಪಿ.ಬಿ. ಪುತ್ರ ಚರಣ್ ಅಂತಿಮ ವಿಧಿ-ವಿಧಾನಗಳನ್ನು ನೆರವೇರಿಸಿದರು.

ಅಂತಿಮ ವಿಧಿ-ವಿಧಾನಗಳ ಬಳಿಕ ಪೊಲೀಸರಿಂದ ಕುಶಾಲತೋಪು ಸಿಡಿಸುವ ಮೂಲಕ ಗಾನ ಸಾಮ್ರಾಟನಿಗೆ ಅಂತಿಮ ಗೌರವ ಸಲ್ಲಿಸಲಾಯಿತು. ಬಳಿಕ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು. ಅಂತ್ಯಕ್ರಿಯೆಯಲ್ಲಿ, ಕುಟುಂಬಸ್ಥರು, ಗಣ್ಯರು, ಸಾವಿರಾರು ಅಭಿಮಾನಿಗಳು ಭಾಗಿಯಾಗಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...