ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ನಾಚಿಕೆಗೇಡಿ ಘಟನೆ ನಡೆದಿದೆ. ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ ಪ್ರಕರಣ ಬೆಳಕಿಗೆ ಬಂದಿದೆ. ಮಗಳ ಸ್ನೇಹಿತೆ ಮೇಲೆ ಅತ್ಯಾಚಾರವೆಸಗಿದ ಪಾಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಾಲಕಿ ಗರ್ಭಿಣಿಯಾಗ್ತಿದ್ದಂತೆ ವಿಷ್ಯ ಬಹಿರಂಗವಾಗಿದೆ.
ಪೀಡಿತೆ ಬಾಲಕಿ, ಪಕ್ಕದ ಮನೆಯಲ್ಲಿದ್ದ ಸ್ನೇಹಿತೆ ಮನೆಗೆ ಕೋಚಿಂಗ್ ಗಾಗಿ ಹೋಗ್ತಿದ್ದಳು. ಒಂದು ದಿನ ಸ್ನೇಹಿತೆ ಮನೆಯಲ್ಲಿರಲಿಲ್ಲ. ಮನೆಯಲ್ಲಿದ್ದ ಆಕೆ ತಂದೆ, ಪೀಡಿತೆಯನ್ನು ಬೆದರಿಸಿ ಅತ್ಯಾಚಾರವೆಸಗಿದ್ದಾನೆ. ವಿಷ್ಯ ಹೇಳಿದ್ರೆ ಸಹೋದರರನ್ನು ಹತ್ಯೆ ಮಾಡುವುದಾಗಿ ಬೆದರಿಸಿದ್ದಾನೆ.
ಘಟನೆ ನಡೆದ 6 ತಿಂಗಳ ನಂತ್ರ ಬಾಲಕಿ ಆರೋಗ್ಯ ಹದಗೆಟ್ಟಿದೆ. ಆಸ್ಪತ್ರೆಗೆ ತೋರಿಸಿದಾಗ ಬಾಲಕಿ ಗರ್ಭಿಣಿ ಎಂಬ ವಿಷ್ಯ ಗೊತ್ತಾಗಿದೆ. ಆಗ ಬಾಲಕಿ ಎಲ್ಲವನ್ನೂ ಹೇಳಿದ್ದಾಳೆ. ಕುಟುಂಬಸ್ಥರು ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ಶುರು ಮಾಡಿದ್ದಾರೆ.