ಕೊರೊನಾ ಮಹಾಮಾರಿ ದೇಶವನ್ನೇ ಮಂಡಿಯೂರುವಂತೆ ಮಾಡಿದೆ. ಈ ಮಹಾಮಾರಿಯಿಂದಾಗಿ ಅದೆಷ್ಟೋ ಮದುವೆಗಳು ಮುರಿದು ಬಿದ್ದಿವೆ. ಅಷ್ಟೇ ಅಲ್ಲ ಮದುವೆಯ ನಂತರ ಸೋಂಕಿಗೆ ಒಳಗಾದವರು ಅದೆಷ್ಟೋ ಮಂದಿ. ಆದರೆ ಇಲ್ಲೊಂದು ಮದುವೆ ಮುರಿದು ಬಿದ್ದಿದ್ದೂ ಕೊರೊನಾಗೆ. ಆದರೆ ಅಸಲಿ ಸತ್ಯ ಮಾತ್ರ ಬೇರೆ.
ಮಧ್ಯಪ್ರದೇಶದ ಖಾಂಡ್ವಾದಲ್ಲಿ ಮದುವೆಯೊಂದು ಕೊರೊನಾದಿಂದಾಗಿ ನಿಂತು ಹೋಗಿದೆ. ಇಲ್ಲಿನ 22 ವರ್ಷದ ಯುವತಿಯೊಬ್ಬಳು ಅದೇ ಗ್ರಾಮದ ಯುವಕನನ್ನು ಪ್ರೀತಿಸುತ್ತಿದ್ದಳು. ಮನೆಯವರಿಗೆ ಇಷ್ಟ ಇಲ್ಲದೇ ಇದ್ದರೂ ಮಗಳ ಒತ್ತಾಯಕ್ಕೆ ಒಪ್ಪಿದ್ದಾರೆ. ಇನ್ನೇನು ಮದುವೆ ಹಂತ ತಲುಪಿದ್ದ ಈ ಜೋಡಿಯ ಮದುವೆಯನ್ನು ಸಿಂಪಲ್ ಆಗಿ ಮಾಡಲು ಕುಟುಂಬಸ್ಥರು ನಿರ್ಧಾರ ಮಾಡಿದ್ದಾರೆ.
ಎರಡು ಕುಟುಂಬಸ್ಥರು ಸಬ್ ರಿಜಿಸ್ಟ್ರಾರ್ ಕಚೇರಿಗೆ ಹೋಗಿ ಎಲ್ಲಾ ಪ್ರಕ್ರಿಯೆಗಳು ಮುಗಿಸಿದ್ದಾರೆ. ಕೊನೆಗೆ ವಧು ಮತ್ತು ವರರು ಸಹಿ ಹಾಕುವ ಸಮಯದಲ್ಲಿ ಯುವತಿಯ ಪೋಷಕರು ತಮ್ಮ ಮಗಳಿಗೆ ಕೋವಿಡ್ ಇದೆ ಎಂದು ಜೋರಾಗಿ ಕಿರುಚಿಕೊಂಡಿದ್ದಾರೆ. ಇದರಿಂದ ಅಲ್ಲಿದ್ದ ಮಂದಿ ಒಂದು ಕ್ಷಣ ಬೆಚ್ಚಿಬಿದ್ದಿರುವುದಂತೂ ಸತ್ಯ. ಹೀಗಾಗಿ ತಕ್ಷಣಕ್ಕೆ ಮದುವೆ ನಿಂತು ಹೋಗಿದೆ. ಇನ್ನು ಈ ಯುವತಿಗೆ ಕೋವಿಡ್ ಇರಲಿಲ್ಲವಂತೆ. ಆದರೆ ಅವರ ತಂದೆ ಯಾಕೆ ಹೀಗೆ ಮಾಡಿದರು ಎಂಬ ಪ್ರಶ್ನೆ ಕಾಡತೊಡಗಿದೆ. ಹಾಗೂ ಅಲ್ಲಿದ್ದ ಎಲ್ಲರನ್ನೂ ಕೋವಿಡ್‌ಗೆ ಒಳಪಡಿಸಬೇಕಾದ ಅನಿವಾರ್ಯತೆ ಇದೆ.