ಆಂಧ್ರಪ್ರದೇಶದ ವಿಶಾಖಪಟ್ಟಣಂನ ಮನೆಯೊಂದರ ಸಿಸಿ ಟಿವಿ ದೃಶ್ಯಗಳು ಎಲ್ಲರನ್ನು ಆಘಾತಗೊಳಿಸಿದೆ. ತಂದೆಯೇ ಮಗನನ್ನು ಹೊಡೆದು ಕೊಂದಿದ್ದಾನೆ. ಈ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಕಾರ್ ಪಾರ್ಕಿಂಗ್ ಪ್ರದೇಶದಲ್ಲಿ ಕುಳಿತಿದ್ದ 40 ವರ್ಷದ ಮಗನಿಗೆ ತಂದೆ ಸುತ್ತಿಗೆಯಿಂದ ಹೊಡೆದಿದ್ದಾನೆ. ಆರೋಪಿ ಹೆಸರು ವೀರಾ ರಾಜು ಎನ್ನಲಾಗಿದೆ. ಘಟನೆ ನಂತ್ರ ತಂದೆ ಪೊಲೀಸರಿಗೆ ಶರಣಾಗಿದ್ದಾನೆ.
ತಂದೆ – ಮಗನ ಮಧ್ಯೆ ಆಸ್ತಿ ವಿಚಾರಕ್ಕೆ ಗಲಾಟೆ ನಡೆಯುತ್ತಿತ್ತಂತೆ. ಇದೇ ವಿಚಾರಕ್ಕೆ ಕೋಪಗೊಂಡ ತಂದೆ ಮಗನ ಹಿಂಬದಿಯಿಂದ ಬಂದು ಸುತ್ತಿಗೆ ಏಟು ನೀಡಿದ್ದಾನೆ. ಮಗನ ತಲೆಯಿಂದ ರಕ್ತ ಸೋರುತ್ತಿದ್ದರೂ ತಂದೆ, ಮಗನ ಮೇಲೆ ಹಲ್ಲೆ ನಡೆಸುವುದನ್ನು ಬಿಡಲಿಲ್ಲ.