ಕೊರೊನಾ ವೈರಸ್ ಮಕ್ಕಳ ಆರೋಗ್ಯದ ಮೇಲೆ ಪ್ರಭಾವ ಬೀರುತ್ತಿದೆ. ಕೊರೊನಾ ಸೋಂಕಿನ ಕಾರಣಕ್ಕೆ ಶಾಲೆಗಳಿಗೆ ಹೋಗದೆ ಮಕ್ಕಳು ಮನೆಯಲ್ಲಿದ್ದಾರೆ. ಮಕ್ಕಳನ್ನು ಮನೆಯಿಂದ ಹೊರಗೆ ಬಿಡಲು ಆಗ್ತಿಲ್ಲ. ಸ್ನೇಹಿತರ ಜೊತೆ ಬೆರೆಯುವುದ್ರಿಂದ ಹಿಡಿದು ಪಾಲಕರ ಜೊತೆ ಪ್ರವಾಸಿ ಸ್ಥಳಗಳಿಗೂ ಮಕ್ಕಳು ಹೋಗುವಂತಿಲ್ಲ. ಸದಾ ಮನೆಯಲ್ಲಿರುವ ಮಕ್ಕಳ ಮಾನಸಿಕ ಸ್ಥಿತಿ ಹದಗೆಡುತ್ತಿದೆ.
ಕೊರೊನಾ ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರಿದೆ ಎಂದು ಅಧ್ಯಯನವೊಂದು ಹೇಳಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಹೊಸ ಪ್ರಯತ್ನ ಮಾಡ್ತಿದೆ. ಆಯೋಗವು ಸಂವೇದನಾ ಹೆಸರಿನಲ್ಲಿ ಟೋಲ್ ಫ್ರೀ ಟೆಲಿ ಕೌನ್ಸೆಲಿಂಗ್ ಪ್ರಾರಂಭಿಸಿದೆ. ಟೋಲ್-ಫ್ರೀ ಸಂಖ್ಯೆ 1800-1212-830ನ್ನು ಶುರು ಮಾಡಿದೆ.
ಮಕ್ಕಳ ಜೊತೆ ಮಾತನಾಡುವ ಮೂಲಕ ತಜ್ಞರು ಮಕ್ಕಳ ಸಮಸ್ಯೆಗೆ ಪರಿಹಾರ ನೀಡುವ ಪ್ರಯತ್ನ ಮಾಡಲಿದ್ದಾರೆ. ಟೋಲ್-ಫ್ರೀ ಸಂಖ್ಯೆಯ ಮೂಲಕ ಸಲಹೆಗಾರರೊಂದಿಗೆ ಬೆಳಿಗ್ಗೆ 10 ರಿಂದ ಬೆಳಿಗ್ಗೆ 1 ರವರೆಗೆ ಮತ್ತು ಸೋಮವಾರದಿಂದ ಶನಿವಾರದವರೆಗೆ ಮಧ್ಯಾಹ್ನ 3 ರಿಂದ ರಾತ್ರಿ 8 ರವರೆಗೆ ಮಾತನಾಡಬಹುದು.