ಇಬ್ಬರಲ್ಲ ಎರಡು ಕುಟುಂಬಗಳನ್ನು ಬೆಸೆಯುವುದು ಮದುವೆ. ಭಾರತದಲ್ಲಿ ಮದುವೆಗೆ ಮಹತ್ವದ ಸ್ಥಾನವಿದೆ. ಮದುವೆ ನಂತ್ರ ವಂಶವೃದ್ಧಿ ಎಂಬ ನಂಬಿಕೆಯಲ್ಲಿ ಇಲ್ಲಿನವರು ಬದುಕುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಲಿವ್ ಇನ್ ಜೀವನಕ್ಕೆ ಭಾರತೀಯರು ಒಗ್ಗಿಕೊಳ್ತಿದ್ದಾರೆ. ಆದ್ರೆ ಈಗ್ಲೂ ಸಾಂಪ್ರದಾಯ ಕುಟುಂಬಗಳು ಲಿವ್ ಇನ್ ಒಪ್ಪಿಕೊಳ್ತಿಲ್ಲ. ಆದ್ರೆ ರಾಜಸ್ತಾನದ ಗರಾಸಿಯಾ ಜನಾಂಗದಲ್ಲಿ ವಿಭಿನ್ನ ಪದ್ಧತಿ ಚಾಲ್ತಿಯಲ್ಲಿದೆ.
ಸುಮಾರು 100 ವರ್ಷಗಳಿಂದ ಇಲ್ಲಿನ ಜನರು ಈ ಪದ್ಧತಿ ಅನುಸರಿಸಿಕೊಂಡು ಬರ್ತಿದ್ದಾರೆ. ಇಲ್ಲಿನ ಜನರು ಮಕ್ಕಳಾಗುವವರೆಗೆ ಮದುವೆಯಾಗುವುದಿಲ್ಲ. ಮಕ್ಕಳಾದ್ಮೇಲೆ ಮದುವೆಯಾಗ್ತಾರೆ. ಯಸ್, ವಿಚಿತ್ರವೆನಿಸಿದ್ರೂ ಇದು ಸತ್ಯ.
ರಾಜಸ್ತಾನ್-ಗುಜರಾತ್ ಮಧ್ಯೆ ಮೇಳವೊಂದು ನಡೆಯುತ್ತದೆ. ಅಲ್ಲಿಗೆ ಬರುವ ಹುಡುಗ-ಹುಡುಗಿಯರು ತಮ್ಮ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ತಾರೆ. ಒಟ್ಟಿಗೆ ವಾಸ ಮಾಡ್ತಾರೆ. ಮಕ್ಕಳಾದ್ಮೇಲೆ ಮದುವೆಯಾಗ್ತಾರೆ. ಮೊದಲೇ ಮದುವೆಯಾದ್ರೆ ಮಕ್ಕಳಾಗಲ್ಲ ಎಂಬ ನಂಬಿಕೆ ಇಲ್ಲಿನ ಜನರಿಗಿದೆ. ಇದೇ ಕಾರಣಕ್ಕೆ ಮಕ್ಕಳಾದ್ಮೇಲೆ ಇವರು ಮದುವೆಯಾಗ್ತಾರೆ.