ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಭೂಮಿ ಪೂಜೆಗೆ ಸಿದ್ಧತೆ ಬಹುತೇಕ ಪೂರ್ಣಗೊಂಡಿದೆ. ಆಗಸ್ಟ್ 5ರ ಐತಿಹಾಸಿಕ ದಿನಕ್ಕೆ ಅಯೋಧ್ಯೆ ಸಿಂಗಾರಗೊಂಡಿದೆ. ಅಯೋಧ್ಯೆ ಸೌಂದರ್ಯ ಇಮ್ಮಡಿಗೊಂಡಿದ್ದು, ದೀಪಾವಳಿಯಂತೆ ಅಯೋಧ್ಯೆ ಕಂಗೊಳಿಸುತ್ತಿದೆ.
ಭೂಮಿ ಪೂಜೆಗೆ 5100 ಕಳಸ ಸಿದ್ಧಪಡಿಸಲಾಗಿದೆ. ಇದ್ರಲ್ಲಿ ಕೆಲ ಕಳಸವನ್ನು ಪ್ರಧಾನಿ ನರೇಂದ್ರ ಮೋದಿಯವರ ಸ್ವಾಗತಕ್ಕೆ ಬಳಸಲಾಗುವುದು. ಮೋದಿ ಆಗಮಿಸುವ ದಾರಿಯ ಎರಡೂ ಬದಿಯಲ್ಲಿ ಕಳಸವನ್ನು ಇಡಲಾಗುವುದು.
ಅಯೋಧ್ಯೆಯಲ್ಲಿ ಇಂದು ಮತ್ತು ನಾಳೆ ದೀಪಗಳನ್ನು ಬೆಳಗಿಸಲಾಗುತ್ತದೆ. ಅಯೋಧ್ಯೆಗೆ ಇಂದು ಸಂಜೆಯಿಂದಲೇ ಬೇರೆ ಊರಿನ ಜನರ ಪ್ರವೇಶವನ್ನು ನಿಷೇಧಿಸಲಾಗಿದೆ. ಮಾರುಕಟ್ಟೆ ತೆರೆದಿರುತ್ತದೆ. ಆದ್ರೆ ಒಂದು ಪ್ರದೇಶದಲ್ಲಿ ಐದು ಜನರಿಗಿಂತ ಹೆಚ್ಚು ಮಂದಿ ಒಟ್ಟುಗೂಡುವಂತಿಲ್ಲ. ಇಂದಿನಿಂದಲೇ ಕೀರ್ತನೆ ಶುರುವಾಗಲಿದೆ. ಸಂತರು ಅಲ್ಲಲ್ಲಿ ಕ್ಯಾಂಪ್ ಮಾಡಿದ್ದು, ರಾಮ ಚರಿತ ಮಾನಸ ಓದುವಂತೆ ಸಲಹೆ ನೀಡಲಾಗಿದೆ.