ಕೊರೊನಾ ಲಸಿಕೆ ಪಡೆಯಲು ಭಾರತ ಸರ್ಕಾರ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ. ದೇಶದ ಕಣ್ಣು, ಸದ್ಯ ಆಕ್ಸ್ಫರ್ಡ್ ವಿಶ್ವವಿದ್ಯಾಲಯ-ಅಸ್ಟ್ರಾಜೆನೆಕಾದ ಕೋವಿಶೀಲ್ಡ್ ಲಸಿಕೆ ಮೇಲಿದೆ. ಲಸಿಕೆ 2020 ರ ಅಂತ್ಯದ ವೇಳೆಗೆ ಭಾರತೀಯರಿಗೆ ಲಭ್ಯವಾಗುವ ಸಾಧ್ಯತೆಯಿದೆ.
ದೇಶದಲ್ಲೂ ಎರಡು ಲಸಿಕೆಗಳ ಪ್ರಯೋಗ ನಡೆಯುತ್ತಿದೆ. ಆದ್ರೆ ಸ್ಪರ್ಧೆಯಲ್ಲಿ ಆಕ್ಸ್ಫರ್ಡ್ ಮುಂದಿದೆ. ಪುಣೆ ಮೂಲದ ಎಸ್‌ಐಐ ಈ ಲಸಿಕೆ ಉತ್ಪಾದನೆಯ ಪಾಲುದಾರಿಕೆ ಪಡೆದಿದೆ. ಎಸ್‌ಐಐ – ಆಕ್ಸ್ಫರ್ಡ್ ಲಸಿಕೆಗಳ 2 ಮತ್ತು 3ನೇ ಹಂತದ ಪ್ರಯೋಗ ಪ್ರಾರಂಭವಾಗಿದೆ. ದೇಶದ 17 ನಗರಗಳಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟ ಸುಮಾರು 1,600 ಜನರು ಪ್ರಯೋಗಗಳಿಗೆ ಒಳಗಾಗುತ್ತಿದ್ದಾರೆ.
ಭಾರತದಲ್ಲಿ ತಯಾರಾಗುತ್ತಿರುವ Covaxin ಮತ್ತು Zycov-D ಒಂದು ಮತ್ತು ಎರಡನೇ ಹಂತದ ಪ್ರಯೋಗದಲ್ಲಿದೆ. ಆಕ್ಸ್ ಫರ್ಡ್ ದೊಡ್ಡ ಮಟ್ಟದ ಪರೀಕ್ಷೆ ನಡೆಸುತ್ತಿದ್ದರೆ ಉಳಿದ ಎರಡು ಲಸಿಕೆಗಳ ಪರೀಕ್ಷೆಗೆ ಸಾವಿರದಿಂದ ಸಾವಿರದ ಒಂದು ನೂರು ಜನರನ್ನು ಬಳಸಿಕೊಳ್ಳಲಾಗ್ತಿದೆ.