ಭುವನೇಶ್ವರ: ಯುದ್ಧಗಳಲ್ಲಿ ಪ್ರಮುಖ ಪಾತ್ರ ವಹಿಸುವ ಹೈಪರ್ ಸಾನಿಕ್ ತಂತ್ರಜ್ಞಾನದ ವಾಹನವೊಂದನ್ನ ಭಾರತ ಯಶಸ್ವೀ ಪ್ರಯೋಗ ನಡೆಸಿದೆ.
ಒಡಿಶಾದ ಬಾಲಸೂರ್ ನ ಅಬ್ದುಲ್ ಕಲಾಂ ಪರೀಕ್ಷಾ ಕೇಂದ್ರದಲ್ಲಿ ಹೈಪರ್ ಸಾನಿಕ್ ತಂತ್ರಜ್ಞಾನ ವಾಹನದ ಯಶಸ್ವೀ ಪ್ರಯೋಗ ನಡೆಸಲಾಯಿತು. ಈ ಮೂಲಕ ಹೈಪರ್ ಸಾನಿಕ್ ಕ್ಷಿಪಣಿ ಅಭಿವೃದ್ಧಿಗೆ ಡಿ ಆರ್ ಡಿ ಒ ಗೆ ಮುಂದಿನ 5 ವರ್ಷಕ್ಕೆ ಹೆಚ್ಚಿನ ಶಕ್ತಿ ಸಿಕ್ಕಂತಾಗಿದೆ.
ಡಿ ಆರ್ ಡಿ ಒ ಮುಖ್ಯಸ್ಥ ಸತೀಶ್ ರೆಡ್ದಿ ನೇತೃತ್ವದ ಹೈಪರ್ ಸಾನಿಕ್ ಕ್ಷಿಪಣಿ ತಂಡ ಈ ವಾಹನವನ್ನು ದೇಶೀಯವಾಗಿ ಅಭಿವೃದ್ಧಿಪಡಿಸಿದೆ. ಅಮೆರಿಕ, ರಷ್ಯಾ ಹಾಗೂ ಚೀನಾ ದೇಶಗಳು ಈ ಸಾಧನೆ ಮಾಡಿದ ಇತರ ದೇಶಗಳಾಗಿದ್ದು, ಇದೀಗ ಭಾರತ ನಾಲ್ಕನೇ ದೇಶವಾಗಿದೆ.