alex Certify ಭಾರತದಲ್ಲೇಕೆ ಕಾಂಡೋಮ್ ಬಳಕೆ ಕಡಿಮೆ…? ಬಹಿರಂಗವಾಯ್ತು ಈ ಕುರಿತ ʼಶಾಕಿಂಗ್‌ʼ ಸಂಗತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತದಲ್ಲೇಕೆ ಕಾಂಡೋಮ್ ಬಳಕೆ ಕಡಿಮೆ…? ಬಹಿರಂಗವಾಯ್ತು ಈ ಕುರಿತ ʼಶಾಕಿಂಗ್‌ʼ ಸಂಗತಿ

ಭಾರತದ ಜನಸಂಖ್ಯೆಯಲ್ಲಿ ಅರ್ಧದಷ್ಟು ಮಂದಿ 24 ವರ್ಷ ಕೆಳಗಿನವರಾಗಿದ್ದರೆ 65 ಪ್ರತಿಶತ ಮಂದಿ 35 ವರ್ಷ ಕೆಳಗಿನವರಾಗಿದ್ದಾರೆ. ದೇಶದಲ್ಲಿ ಯುವ ಜನತೆಯ ಸಂಖ್ಯೆ ಹೆಚ್ಚಿರೋದ್ರಿಂದ ಸಂತಾನೋತ್ಪತ್ತಿ ಕ್ರಿಯೆ ಕೂಡ ಅಷ್ಟೇ ಆರೋಗ್ಯಕರವಾಗಿದೆ ಎನಿಸಬಹುದು. ಆದರೆ ಕಾಂಡಮೋಲಜಿ ರಿಪೋರ್ಟ್​ನಲ್ಲಿ ಮಾತ್ರ ಈ ನಿರೀಕ್ಷೆ ಉಲ್ಟಾ ಆಗಿದೆ.

ಕಾಂಡೋಮಾಲಜಿ ಎಂಬ ಪದರವನ್ನ ಗ್ರಾಹಕ( ಕನ್​ಸ್ಯೂಮರ್​), ಕಾಂಡೋಮ್​ ಹಾಗೂ ಸೈಕಾಲಜಿ ಎಂಬ ಪದಗಳಿಂದ ಆಯ್ಕೆ ಮಾಡಿಕೊಳ್ಳಲಾಗಿದೆ.
ಈ ವರದಿಯ ಪ್ರಕಾರ ದೇಶದಲ್ಲಿ ಹೆಚ್ಚುತ್ತಿರುವ ಯೋಜಿತವಲ್ಲದ ಗರ್ಭಧಾರಣೆ, ಅಸುರಕ್ಷಿತ ಗರ್ಭಪಾತ ಹಾಗೂ ಲೈಂಗಿಕ ಕ್ರಿಯೆ ಸಂಬಂಧಿ ಕಾಯಿಲೆಗಳು ಆರೋಗ್ಯಯುತ ಯುವಜನತೆಯನ್ನ ಹೊಂದುವ ದೇಶದ ಗುರಿಗೆ ತಡೆಗೋಡೆಯಾಗಿ ನಿಂತಿದೆ.

ರಾಷ್ಟ್ರೀಯ ಕುಟುಂಬ ಕಲ್ಯಾಣ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ ದೇಶದಲ್ಲಿ 20 ರಿಂದ 24 ವರ್ಷದ ಪುರುಷರಲ್ಲಿ ಬಹುತೇಕ 80 ಪ್ರತಿಶತ ಮಂದಿ ಲೈಂಗಿಕ ಕ್ರಿಯೆ ವೇಳೆ ಗರ್ಭನಿರೋಧಕವಾದ ಕಾಂಡೋಮ್​ ಬಳಕೆ ಮಾಡುತ್ತಿಲ್ಲ. ಇದರಿಂದಾಗಿ ಯೋಜಿತವಲ್ಲದ ಗರ್ಭದಾರಣೆ, ಅಸುರಕ್ಷಿತ ಗರ್ಭಪಾತ ಹಾಗೂ ಲೈಂಗಿಕ ಕ್ರಿಯೆ ಸಂಬಂಧಿ ಕಾಯಿಲೆಗಳು ಹೆಚ್ಚಾಗುತ್ತಿವೆ .

ಹೆಚ್ಚಿನ ಭಾರತೀಯರು ಲೈಂಗಿಕ ಕ್ರಿಯೆ ವೇಳೆ ಕಾಂಡೋಮ್​ ಬಳಕೆ ಮಾಡಲು ಏಕೆ ನಿರಾಕರಿಸ್ತಾರೆ ಎಂಬ ಪ್ರಶ್ನೆ ಉದ್ಭವವಾಗೋದು ಸಹಜ. ಕಾಂಡೋಮ್​ ಬಳಕೆ ಬಗ್ಗೆ ಸಮಾಜದಲ್ಲಿ ಇರುವ ಮಡಿವಂತಿಕೆ ಹಾಗೂ ಮುಜುಗರದಿಂದಾಗಿ ಜನರು ಈ ರೀತಿ ಮಾಡುತ್ತಿದ್ದಾರೆ. ಇಂತಹ ತಪ್ಪು ಕಲ್ಪನೆಗಳಿಂದ ಜನರು ಇನ್ನೂ ಎಚ್ಚೆತ್ತುಕೊಳ್ಳದೇ ಇರೋದು ಈ ಎಲ್ಲಾ ಸಮಸ್ಯೆಗಳಿಗೆ ಕಾರಣವಾಗಿದೆ.

ವರದಿಗಳ ಪ್ರಕಾರ ದೇಶದಲ್ಲಿ ಕೇವಲ 7 ಪ್ರತಿಶತ ಮಹಿಳೆ ಹಾಗೂ 27 ಪ್ರತಿಶತ ಪುರುಷರು ಮಾತ್ರ ಇಲ್ಲಿಯವರೆಗೆ ಲೈಂಗಿಕ ಕ್ರಿಯೆ ಸಂದರ್ಭದಲ್ಲಿ ಕಾಂಡೋಮ್​ ಬಳಕೆ ಮಾಡಿದ್ದಾರೆ . ಇದರಲ್ಲಿ ಕೇವಲ 3 ಪ್ರತಿಶತ ಮಹಿಳೆ ಹಾಗೂ 13 ಪ್ರತಿಶತ ಪುರುಷರು ಸೆಕ್ಸ್ ಮಾಡೋವಾಗ ನಿರಂತರವಾಗಿ ಕಾಂಡೋಮ್​ ಬಳಕೆ ಮಾಡುತ್ತಾರಂತೆ.

ಗರ್ಭನಿರೋಧಕಗಳ ಬಗೆಗೆ ಸರ್ಕಾರ ಸಾಕಷ್ಟು ರೀತಿಯಲ್ಲಿ ಜಾಗೃತಿ ಮೂಡಿಸಿದ ಹೊರತಾಗಿಯೂ ದೇಶದಲ್ಲಿ ಕಾಂಡೋಮ್​ ಮಾರುಕಟ್ಟೆಯಲ್ಲಿ ಕಳೆದ ಕೆಲ ವರ್ಷಗಳಲ್ಲಿ ಕೇವಲ 2 ಪ್ರತಿಶತ ವಾರ್ಷಿಕ ಬೆಳವಣಿಗೆ ದರ ಕಂಡು ಬಂದಿದೆ. ಇದೇ ಕಾರಣಕ್ಕಾಗಿ ಹೆಚ್​ಐವಿ ಪ್ರಕರಣಗಳ ಸಂಖ್ಯೆಯಲ್ಲಿ ದೇಶವು ವಿಶ್ವದಲ್ಲೇ ಮೂರನೇ ಸ್ಥಾನವನ್ನ ಪಡೆದಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...