ದೇಶದಲ್ಲಿ ಕೊರೊನಾ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಅದ್ರ ನಿಯಂತ್ರಣಕ್ಕೆ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗ್ತಿದೆ. ದೇಶದಲ್ಲಿ ಲಸಿಕೆ ಕಂಡು ಹಿಡಿಯುವ ಪ್ರಯತ್ನ ಕೂಡ ನಡೆದಿದೆ. ಈ ಮಧ್ಯೆ ಕೊರೊನಾ ವಿರುದ್ಧ ಹೋರಾಡುವ ಅನೇಕ ಔಷಧಿಗಳು ಮಾರುಕಟ್ಟೆಗೆ ಬಂದಿವೆ. ಈಗ ಇನ್ನೊಂದು ಔಷಧಿ ಮಾರುಕಟ್ಟೆಗೆ ಬಂದಿದೆ.
ಭಾರತದ ಪ್ರಸಿದ್ಧ ಔಷಧಿ ಕಂಪನಿ ಡಾ. ರೆಡ್ಡಿ ಲ್ಯಾಬೊರೇಟರೀಸ್, ರೆಮೆಡೆಸಿವಿರ್ ಔಷಧಿಯನ್ನು ಬಿಡುಗಡೆ ಮಾಡಿದೆ. ಕೊರೊನಾ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಲು ಈ ಔಷಧಿ ಪರಿಣಾಮಕಾರಿ ಎನ್ನಲಾಗಿದೆ.
ಔಷಧಿಯನ್ನು ದೇಶಾದ್ಯಂತ ಕೊರೊನಾದಿಂದ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳಿಗೆ ಇದನ್ನು ನೀಡಲಾಗುವುದು. ರೆಮಾಡೆಸಿವಿರ್, ಕೊರೊನಾ ರೋಗ ಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಕಂಪನಿ ಹೇಳಿದೆ. ಔಷಧಿ ಸಣ್ಣ 100 ಮಿಗ್ರಾಂ ಬಾಟಲಿಯಲ್ಲಿ ಲಭ್ಯವಿರುತ್ತದೆ. ಇದನ್ನು ಪ್ರಿಸ್ಕ್ರಿಪ್ಷನ್ ಇಲ್ಲದೆ ವೈದ್ಯಕೀಯ ಅಂಗಡಿಯಿಂದ ಖರೀದಿಸಬಹುದು. ಐದು ದಿನಗಳಲ್ಲಿ ಕೊರೊನಾ ಸೋಂಕು ಕಡಿಮೆಯಾಗುತ್ತದೆ ಎನ್ನಲಾಗಿದೆ. ಹಿಂದಿನ ತಿಂಗಳು ಇದೇ ಕಂಪನಿ Avigan ಔಷಧಿಯನ್ನು ಬಿಡುಗಡೆ ಮಾಡಿತ್ತು.