ಭಾರತದಲ್ಲಿ 45 ವರ್ಷಕ್ಕಿಂತ ಮೇಲ್ಪಟ್ಟವರು ಕೊರೊನಾಗೆ ಸಾವನ್ನಪ್ಪುತ್ತಿದ್ದಾರೆಂದು ಆರೋಗ್ಯ ಸಚಿವಾಲಯ ನಿನ್ನೆ ತನ್ನ ವರದಿಯಲ್ಲಿ ಹೇಳಿದೆ. ಈ ಜನರ ಶೇಕಡಾವಾರು ಪ್ರಮಾಣ ಭಾರತದಲ್ಲಿ ಶೇಕಡಾ 85ರಷ್ಟಿದೆ. ಭಾರತದಲ್ಲಿ ಕೊರೊನಾಗೆ ಸಾವನ್ನಪ್ಪುತ್ತಿರುವವರಲ್ಲಿ ಶೇಕಡಾ 53 ರಷ್ಟು ಮಂದಿ 60 ವರ್ಷಕ್ಕಿಂತ ಮೇಲ್ಪಟ್ಟವರು ಎನ್ನಲಾಗಿದೆ. ಭಾರತ ಒಟ್ಟು ಜನಸಂಖ್ಯೆಯಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟವರ ಸಂಖ್ಯೆ ಕೇವಲ ಶೇಕಡಾ 10 ರಷ್ಟಿದೆ.
ಭಾರತದ ಜನಸಂಖ್ಯೆಯ ಶೇಕಡಾ 25 ರಷ್ಟು ಜನರು 45 ವರ್ಷ ಅಥವಾ ಅದಕ್ಕಿಂತ ಹೆಚ್ಚಿನವರು. ಕೊರೊನಾಕ್ಕೆ ಇವರೇ ಶೇಕಡಾ 85ರಷ್ಟು ಜನರು ಸಾಯ್ತಿದ್ದಾರೆಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ಈ ವಯಸ್ಸಿನ ಜನರಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ವಿಶೇಷ ಗಮನ ನೀಡಬೇಕಾಗಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.
ಭಾರತದಲ್ಲಿ 60 ರಿಂದ 74 ವರ್ಷ ವಯಸ್ಸಿನ ಜನಸಂಖ್ಯೆಯು ಶೇಕಡಾ 8 ರಷ್ಟಿದೆ. 75 ವರ್ಷಕ್ಕಿಂತ ಮೇಲ್ಪಟ್ಟವರ ಸಾವಿನ ಸಂಖ್ಯೆ ಶೇಕಡಾ 14 ಕ್ಕಿದೆ. ಭಾರತದ ಜನಸಂಖ್ಯೆಯ ಶೇಕಡಾ 18 ರಷ್ಟು ಜನರು 15-29 ವಯಸ್ಸಿನವರಿದ್ದು, ಶೇಕಡಾ 3 ರಷ್ಟು ಕೊರೊನಾಗೆ ಇವ್ರ ಸಾವಾಗ್ತಿದೆ. ಜನಸಂಖ್ಯೆಯ ಶೇಕಡಾ 22 ರಷ್ಟು ಮಂದಿ 30-44 ವಯಸ್ಸಿನವರಿದ್ದು, ಕೊರೊನಾಕ್ಕೆ ಇವ್ರ ಸಾವಿನ ಸಂಖ್ಯೆ ಶೇಕಡಾ 11 ರಷ್ಟಿದೆ.