ಕೊರೊನಾ ಮಹಾಮಾರಿಯಿಂದ ಬೇಸತ್ತಿದ್ದ ಜನತೆಗೆ ಇದೀಗ ಖುಷಿಯ ವಿಚಾರ ಸಿಕ್ಕಿದೆ. ಕೊವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ತುರ್ತು ಬಳಕೆಗೆ ಅನುಮತಿ ಸಿಕ್ಕ ಬೆನ್ನಲ್ಲೇ ಸಾಕಷ್ಟು ಸಿದ್ದತೆಗಳನ್ನು ಸರ್ಕಾರ ಮಾಡಿದೆ. ಜನವರಿ 13 ರಿಂದ ಕೊರೊನ ಲಸಿಕೆಯನ್ನು ನೀಡುವ ಸಾಧ್ಯತೆ ಇದೆ. ಮೊದಲು ಕೊರೊನಾ ವಾರಿಯರ್ಸ್ ಗಳಿಗೆ ಲಸಿಕೆ ನೀಡಲಾಗುತ್ತದೆ. ಈ ಬೆನ್ನಲ್ಲೇ ಭಾರತದಿಂದ ಬ್ರೆಜಿಲ್ ಗೆ ಈ ಲಸಿಕೆಗಳು ರಫ್ತಾಗಲಿವೆ ಅಂತೆ.
ಹೌದು ಈ ವಿಚಾರದ ಬಗ್ಗೆ ಪ್ರಕಟಣೆ ಹೊರಡಿಸಿರುವ ಬ್ರೆಜಿಲ್ ವಿದೇಶಾಂಗ ಸಚಿವಾಲಯ ಹಾಗೂ ಆರೋಗ್ಯ ಸಚಿವಾಲಯ, ಭಾರತದಿಂದ ಆಮದು ಮಾಡಿಕೊಳ್ಳಲು ನಮಗೆ ಯಾವುದೇ ನಿರ್ಭಂಧ ಹೇರಲಾಗಿಲ್ಲ. ಹೀಗಾಗಿ ಇದೇ ತಿಂಗಳು ಆಮದು ಮಾಡಿಕೊಳ್ಳಲು ಚರ್ಚೆ ನಡೆಸಲಾಗಿದೆ. ಆದಷ್ಟು ಬೇಗ ಲಸಿಕೆ ನಮಗೂ ಸಿಗುವಂತೆ ಆಗುತ್ತದೆ ಎಂದಿದ್ದಾರೆ.
ಕೋವಿಶೀಲ್ಡ್ ಲಸಿಕೆಯನ್ನು ಆಕ್ಸ್ ಫರ್ಡ್ ಹಾಗೂ ಆಸ್ಟ್ರಾಜೆನಿಕಾ ಸಂಸ್ಥೆಗಳು ಅಭಿವೃದ್ಧಿ ಪಡಿಸಿವೆ. ಈಗಾಗಲೇ ಪ್ರಯೋಗಗಳು ಕೂಡ ಯಶಸ್ವಿಯಾಗಿವೆ. ಕೇಂದ್ರ ಸರ್ಕಾರ ಅನುಮತಿ ನೀಡಿದ ಬೆನ್ನಲ್ಲೇ ನಾಲ್ಕು ಹಂತದಲ್ಲಿ ಲಸಿಕೆ ನೀಡಲಾಗುತ್ತದೆ.