ಹಾವು ಕಡಿತದಿಂದ ದೇಶದಲ್ಲಿ ಪ್ರತಿ ವರ್ಷ ಸಾವಿರಾರು ಮಂದಿ ಸಾವನ್ನಪ್ಪುತ್ತಿದ್ದಾರೆ. ಅದರಲ್ಲೂ ಹೊಲ-ಗದ್ದೆ, ಎಸ್ಟೇಟ್ ಗಳಲ್ಲಿ ಕೆಲಸ ಮಾಡುವ ಕೃಷಿ ಕಾರ್ಮಿಕರು, ರೈತರು ಹೆಚ್ಚಿನ ಸಂಖ್ಯೆಯಲ್ಲಿ ಹಾವು ಕಡಿತಕ್ಕೆ ಒಳಗಾಗುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಐಐಎಸ್ಸಿ ಮಹತ್ವದ ಅಧ್ಯಯನ ನಡೆಸಿದ್ದು, ದೇಶದಲ್ಲಿ ಪ್ರತಿ ವರ್ಷ ಹಾವು ಕಡಿತದಿಂದ 58 ಸಾವಿರ ಮಂದಿ ಸಾವನ್ನಪ್ಪುತ್ತಿದ್ದಾರೆ ಎಂಬ ಬೆಚ್ಚಿಬೀಳಿಸುವ ಸಂಗತಿಯನ್ನು ಬಹಿರಂಗಪಡಿಸಿದೆ.
ಮುಷ್ಕರಕ್ಕೆ ಮುಂದಾದ ಸಾರಿಗೆ ನೌಕರರು: ಖಾಸಗಿ ವಾಹನಕ್ಕೆ ತಾತ್ಕಾಲಿಕ ಪರ್ಮಿಟ್ ನೀಡಲು ಸರ್ಕಾರದ ಸಿದ್ಧತೆ
ಅದರಲ್ಲೂ ವಿಷಪೂರಿತ ಹಾವುಗಳಾದ ನಾಗರಹಾವು, ರುಸೆಲ್ಸ್ ವೈಪರ್, ಕಾಮನ್ ಕ್ರೈಟ್ ಹಾಗೂ ಸಾ ಸ್ಕೈಲ್ಡ್ ವೈಪರ್ ನಿಂದ ಸಾವು ಸಂಭವಿಸಿರುವ ಪ್ರಮಾಣ ಹೆಚ್ಚು ಎಂದು ತಿಳಿಸಲಾಗಿದ್ದು, ಜೊತೆಗೆ ಇವುಗಳ ಕಡಿತಕ್ಕೊಳಗಾದವರು ಗಂಭೀರ ಆರೋಗ್ಯ ಸಮಸ್ಯೆ ಎದುರಿಸಿದ್ದಾರೆ ಎನ್ನಲಾಗಿದೆ.