
ಹಿಂದಿಯಲ್ಲಿ ನಾಲ್ಕು ಪುಟಗಳ ಸುದೀರ್ಘ ಪತ್ರ ಬರೆದಿರುವ ಪ್ರಧಾನಿ ಮೋದಿ, ಬಿಹಾರದ ಸರ್ವತೋಮುಖ ಅಭಿವೃದ್ಧಿಗಾಗಿ ನಿತೀಶ್ ಕುಮಾರ್ ಸರ್ಕಾರದ ಅಗತ್ಯವಿದೆ ಎಂದು ಹೇಳಿದ್ದಾರೆ.
ಬಿಹಾರದಲ್ಲಿ ಅಭಿವೃದ್ಧಿ ಯೋಜನೆಗಳನ್ನ ನಿರ್ಬಂಧಿಸಲಾಗುವುದಿಲ್ಲ. ನನಗೆ ಬಿಹಾರದಲ್ಲಿ ನಿತೇಶ್ ಅವರ ಸರ್ಕಾರ ಬೇಕು. ಈ ದಶಕದಲ್ಲಿ ಡಬಲ್ ಎಂಜಿನ್ ಸರ್ಕಾರದ ಮೇಲೆ ಸವಾರಿ ಮಾಡುವ ಬಿಹಾರ ಹೊಸ ಎತ್ತರದಲ್ಲಿ ಅಭಿವೃದ್ಧಿ ಕಾಣುತ್ತೆ ಎಂಬ ನಂಬಿಕೆ ನನಗಿದೆ ಅಂತಾ ಪತ್ರದಲ್ಲಿ ಬರೆದಿದ್ದಾರೆ.