ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗ್ತಿವೆ. ಗುರುಗ್ರಾಮ್ ನಲ್ಲಿ 25 ವರ್ಷದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ನಾಲ್ವರು ಪೈಶಾಚಿಕ ಕೃತ್ಯವೆಸಗಿದ್ದಾರೆ. ಕಾಮತೃಷೆ ತೀರಿಸಿಕೊಂಡ ಪಾಪಿಗಳು ಯುವತಿ ಮೇಲೆ ಹಲ್ಲೆ ನಡೆಸಿದ್ದಾರೆ. ಯುವತಿ ತಲೆಗೆ ತೀವ್ರ ಗಾಯಗಳಾಗಿವೆ.
ರಾಕ್ಷಸ ಕೃತ್ಯವೆಸಗಿದವರ ವಯಸ್ಸು 20 ರಿಂದ 25 ವರ್ಷವೆಂದು ಪೊಲೀಸರು ಹೇಳಿದ್ದಾರೆ. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಪೊಲೀಸರು ಅಪರಾಧಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗುರ್ಗಾಂವ್ನ ಡಿಎಲ್ಎಫ್ 2 ನೇ ಹಂತದಲ್ಲಿ ಈ ಘಟನೆ ನಡೆದಿದೆ. ಆರೋಪಿಗಳಲ್ಲಿ ಮೂವರು ಡೆಲಿವರಿ ಬಾಯ್ಗಳು.
ನಾಲ್ವರು ಸೇರಿ ಯುವತಿಯನ್ನು ಸಿಕಂದರ್ಪುರ ಮೆಟ್ರೋ ನಿಲ್ದಾಣದ ಬಳಿ ಭೇಟಿಯಾಗಿದ್ದಾರೆ. ನಂತ್ರ ಬಿಲ್ಡರ್ ಕಚೇರಿಗೆ ಕರೆದೊಯ್ದಿದ್ದಾರೆ. ಇದೇ ಕಚೇರಿಯಲ್ಲಿ ಅತ್ಯಾಚಾರವೆಸಗಿದ್ದಾರೆ. ನಂತ್ರ ಮಹಿಳೆಗೆ ಹೊಡೆದಿದ್ದಾರೆ.