
ಕೋವಿಡ್ ಸಾಂಕ್ರಮಿಕ ಈ ಸಂಕಷ್ಟದ ಕಾಲಘಟ್ಟದಲ್ಲಿ ಜೋಡಿಗಳು ತಮ್ಮ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳಲು ವಿಶೇಷ ಐಡಿಯಾ ಒಂದನ್ನು ಮಾಡಿಕೊಂಡಿದ್ದಾರೆ. ಪಿಪಿಇ ಕಿಟ್ ಧರಿಸಿಕೊಂಡು ಮದುವೆಯಾಗುವುದರಿಂದ ಹಿಡಿದು ವರ್ಚುವಲ್ ವಿವಾಹಗಳವರೆಗೂ ಹೊಸ ಅನ್ವೇಷಣೆಗಳ ಈ ಪಟ್ಟಿ ಬೆಳೆಯುತ್ತಲೇ ಸಾಗುತ್ತದೆ.
ಇವುಗಳ ನಡುವೆಯೇ ಬಿಹಾರದ ಬೇಗುಸಾರಾಯ್‌ನ ಈ ದಂಪತಿಗಳು ಬಿದಿರು ಕಡ್ಡಿಗಳ ಹಾರಗಳನ್ನು ಬದಲಿಸಿಕೊಳ್ಳುವ ಮೂಲಕ ಅಂತರ್ಜಾಲದಲ್ಲಿ ಸದ್ದು ಮಾಡುತ್ತಿದ್ದಾರೆ.
ಛತ್ತೀಸ್‌ಘಡದ ಸಾರಿಗೆ ಆಯುಕ್ತರಾದ ದೀಪಾನ್ಶು ಕಬ್ರಾ ಅವರು ಈ ಶೇರ್ ಮಾಡಿರುವ ಈ ವಿಡಿಯೋದಲ್ಲಿ ನವಜೋಡಿಗಳು ಮಾಸ್ಕ್ ಧರಿಸಿಕೊಂಡು ವಿಶೇಷ ಧಿರಿಸಿನಲ್ಲಿ ಕಂಗೊಳಿಸುತ್ತಿದ್ದಾರೆ.