ಗಾಲ್ವನ್ ಗಡಿಯಲ್ಲಿ ತನ್ನ ಸೇನೆ ಜಮಾವಣೆ ಮಾಡುವ ಮೂಲಕ ಭಾರತದೊಂದಿಗೆ ಕಾಲು ಕೆದರಿಕೊಂಡು ಕದನಕ್ಕೆ ಬಂದಿದ್ದ ಚೀನಾ ಈಗ ತೆಪ್ಪಗಿದೆ. ಗಡಿಯಲ್ಲಿ ಆಗಾಗ ತನ್ನ ಕ್ಯಾತೆ ಬುದ್ಧಿಯನ್ನು ತೋರುತ್ತಿದ್ದರೂ ಸಹ ಭಾರತೀಯ ಸೈನಿಕರು ಅದಕ್ಕೆ ತಕ್ಕ ಪ್ರತ್ಯುತ್ತರ ನೀಡುತ್ತಿದ್ದಾರೆ.
ಇದರ ಮಧ್ಯೆ ಮತ್ತೊಂದು ಕುತಂತ್ರ ಬುದ್ದಿಗೆ ಚೀನಾ ಕೈಹಾಕಿದ್ದು, ದೊಡ್ಡ ಮಟ್ಟದಲ್ಲಿ ಸೈಬರ್ ದಾಳಿಯನ್ನು ನಡೆಸಲು ಸಿದ್ಧತೆ ನಡೆಸಿದೆ ಎಂದು ಹೇಳಲಾಗಿದೆ. ಭಾರತದ ಸುಮಾರು 10 ಸಾವಿರ ಮಂದಿ ಗಣ್ಯರನ್ನು ಈ ಸೈಬರ್ ದಾಳಿಗೆ ಗುರಿಯಾಗಿಸಿಕೊಳ್ಳಲಾಗಿದೆ ಎನ್ನಲಾಗಿದೆ.
ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಸೇನಾ ಮುಖ್ಯಸ್ಥರು, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಈ ಪಟ್ಟಿಯಲ್ಲಿದ್ದಾರೆ ಎಂದು ಹೇಳಲಾಗಿದೆ. ಚೀನಾದ ಈ ಸೈಬರ್ ದಾಳಿಯನ್ನು ಎದುರಿಸಲು ಭಾರತ ಕೂಡ ಸನ್ನದ್ಧವಾಗಿದೆ ಎಂದು ಹೇಳಲಾಗಿದೆ.