ಅಯೋಧ್ಯೆ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನಡೆದಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಉಪಸ್ಥಿತಿಯಲ್ಲಿ ಪೂಜೆ ಮಾಡಿ, ಇಟ್ಟಿಗೆ ಇಡಲಾಗಿದೆ.
40 ಕೆ.ಜಿ. ಬೆಳ್ಳಿ ಇಟ್ಟಿಗೆ ಇಟ್ಟು ಭೂಮಿ ಪೂಜೆ ಮಾಡಲಾಯ್ತು. ಶ್ರೀರಾಮನ ಹೆಸರಿನಲ್ಲಿ ಮೋದಿ ಸಂಕಲ್ಪ ಮಾಡಿಕೊಂಡರು. ಕಾಶಿ ಅರ್ಚಕರಿಂದ ಪೂಜೆ ನಡೆಯಿತು. ಗರ್ಭಗುಡಿ ಪ್ರದೇಶದಲ್ಲಿ ಶಿಲಾನ್ಯಾಸ ಪೂಜೆ ನಡೆಯಿತು. ಶ್ರೀರಾಮನ ಪುರಾತನ ಶಿಲೆಗಳಿಗೆ ಪೂಜೆ ಮಾಡಲಾಯ್ತು. ನಂದ ಭದ್ರಾ, ಜಯಾ, ರಿಕ್ತಾ, ಪೂರ್ಣ ಹೆಸರಿನ ಐದು ಇಟ್ಟಿಗಳಿಗೆ ಪೂಜೆ ಮಾಡಲಾಯ್ತು.
ಮೂರು ದಿನಗಳ ಸುದೀರ್ಘ ಪೂಜೆ ನಂತ್ರ ಈ ಪೂಜೆ ನಡೆದಿದೆ. ಇಡೀ ದೇಶದಾದ್ಯಂತ ರಾಮನ ಭಕ್ತರು ಈ ಪೂಜೆಯನ್ನು ನೇರಪ್ರಸಾರದಲ್ಲಿ ವೀಕ್ಷಣೆ ಮಾಡಿದ್ದಾರೆ.