ಕೊರೊನಾ ವೈರಸ್ ಅಂತ್ಯಕ್ಕೆ ವಿಜ್ಞಾನಿಗಳು ಹರಸಾಹಸ ಮಾಡ್ತಿದ್ದಾರೆ. ಈಗಾಗಲೇ ಈ ವೈರಸ್ ನಿರ್ನಾಮ ಮಾಡಲು ಲಸಿಕೆ ಪ್ರಯೋಗ ನಡೆಯುತ್ತಿದೆ. ಆದ್ರೆ ಈವರೆಗೂ ಅಧಿಕೃತವಾಗಿ ಯಾವುದೇ ಲಸಿಕೆ ಮಾರುಕಟ್ಟೆಗೆ ಬಂದಿಲ್ಲ.
ಒಂದು ಕಡೆ ಲಸಿಕೆ ಕಂಡು ಹಿಡಿಯುವ ಪ್ರಯತ್ನ ನಡೆಯುತ್ತಿದೆ. ಇನ್ನೊಂದು ಕಡೆ ಔಷಧಿಗಳನ್ನ ಸಂಗ್ರಹಿಸಿಡುವುದಕ್ಕೆ ಸರ್ಕಾರ ಹೊಸ ಮಾರ್ಗ ಕಂಡು ಹಿಡಿದಿದೆ. ಅದಕ್ಕಾಗಿ ದೊಡ್ಡ ಪ್ರಮಾಣದ ಕೋಲ್ಡ್ ಸ್ಟೋರೇಜ್ ಇಡುವ ವ್ಯವಸ್ಥೆ ಮಾಡಲಾಗುತ್ತಿದೆ. ಇದಕ್ಕಾಗಿ ಈಗಾಗಲೇ ಆಹಾರ ಸಂಸ್ಕರಣಾ ವಿಭಾಗ, ಕೃಷಿಯ ಖಾಸಗಿ ಮತ್ತು ಸರ್ಕಾರಿ ಕಂಪನಿಗಳೊಂದಿಗೆ ರಾಷ್ಟ್ರೀಯ ತಜ್ಞರ ಗುಂಪು ಮಾತುಕತೆ ನಡೆಸುತ್ತಿದೆ. ಇನ್ನೂ ಖಾಸಗಿ ಕಂಪನಿಗಳಾದ ಸ್ವಿಗ್ಗಿ ಹಾಗೂ ಝೊಮ್ಯಾಟೋ ಕಂಪನಿಗಳ ಜೊತೆಗೂ ಮಾತುಕತೆ ನಡೆಸಲಾಗುತ್ತಿದೆ.
ಈ ಔಷಧಿಯನ್ನ 2-8 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಇಡಲಾಗುವುದು. ಇದಕ್ಕಾಗಿ ಈಗ ತಜ್ಞರ ಗುಂಪು ಉತ್ತರ ಪ್ರದೇಶ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ರಾಜಸ್ತಾನ, ಆಂಧ್ರಪ್ರದೇಶ, ಕರ್ನಾಟಕ, ಗುಜರಾತ್, ಕೇರಳ, ತೆಲಂಗಾಣ, ಮತ್ತು ದೆಹಲಿಯಲ್ಲಿ ಈ ಕೋಲ್ಡ್ ಸ್ಟೋರೇಜ್ ನ ವ್ಯವಸ್ಥೆ ಮಾಡಿಟ್ಟುಕೊಳ್ಳಲು ಸೂಚಿಸಿದೆ.