ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಭಯಾನಕ ಘಟನೆ ನಡೆದಿದೆ. 13 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದ ದುಷ್ಟರು ಆಕೆ ಕಣ್ಣು ಕಿತ್ತಿದ್ದಾರೆ. ಕತ್ತು ಹಿಸುಕಿ, ನಾಲಿಗೆ ಕತ್ತರಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ಘಟನೆ ಆಗಸ್ಟ್ 14ರಂದು ನಡೆದಿದೆ. ಬಾಲಕಿ ಮಲ ವಿಸರ್ಜನೆಗೆಂದು ಕಬ್ಬಿನ ಗದ್ದೆಗೆ ಹೋಗಿದ್ದಳಂತೆ. ಬಾಲಕಿ ಮನೆಗೆ ವಾಪಸ್ ಬರದ ಕಾರಣ ಪಾಲಕರು ಹುಡುಕಾಟ ಶುರು ಮಾಡಿದ್ದಾರೆ. ಕಬ್ಬಿನ ಗದ್ದೆಯಿಂದ ಹೊರಗೆ ಬಾಲಕಿ ಶವ ಸಿಕ್ಕಿದೆ.
ಶವದಿಂದ ಸ್ವಲ್ಪ ದೂರದಲ್ಲಿ ಆರೋಪಿಗಳಿದ್ದರು ಎನ್ನಲಾಗಿದೆ. ಅವ್ರನ್ನು ಹಿಡಿಯಲು ಓಡಿದ್ರೆ ತಪ್ಪಿಸಿಕೊಂಡ್ರು ಎಂದು ಬಾಲಕಿ ತಂದೆ ಹೇಳಿದ್ದಾರೆ. ಕುಟುಂಬಸ್ಥರು ಮೂವರ ಮೇಲೆ ಸಂಶಯ ವ್ಯಕ್ತಪಡಿಸಿದ್ದಾರೆ. ಇಬ್ಬರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಮರಣೋತ್ತರ ಪರೀಕ್ಷೆ ನಡೆದಿತ್ತು, ಅದ್ರಲ್ಲಿ ಬಾಲಕಿ ಮೇಲೆ ಅತ್ಯಾಚಾರ ನಡೆದಿರುವುದು ಸ್ಪಷ್ಟವಾಗಿದೆ.