ದೇಶದ ಜನತೆಯನ್ನು ಕಂಗೆಡಿಸಿರುವ ಕೊರೊನಾ ಮಹಾಮಾರಿಗೆ ಪರಿಣಾಮಕಾರಿ ಔಷಧ ಎಂದು ಹೇಳುವ ಮೂಲಕ ಬಾಬಾ ರಾಮದೇವ್ ನೇತೃತ್ವದ ಪತಂಜಲಿ ಸಂಸ್ಥೆ ‘ಕೊರೊನಿಲ್’ ಎಂಬ ಔಷಧವನ್ನು ಬಿಡುಗಡೆ ಮಾಡಿತ್ತು.
ಆ ಬಳಿಕ ಬಹಳಷ್ಟು ವಿವಾದ ಉಂಟಾದ ಕಾರಣ ತಮ್ಮ ಔಷಧ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಕೊರೊನಾಗೆ ಔಷಧಿಯಲ್ಲ ಎಂದು ಪತಂಜಲಿ ಹೇಳಿತ್ತಾದರೂ ತನ್ನ ಉತ್ಪನ್ನದ ಮೇಲೆ ‘ಕೊರೊನಿಲ್’ಎಂಬ ಹೆಸರನ್ನು ಮುಂದುವರಿಸಿತ್ತು.
ಇದೀಗ ಮದ್ರಾಸ್ ಹೈಕೋರ್ಟ್ ಪತಂಜಲಿ ಸಂಸ್ಥೆಗೆ ದೊಡ್ಡ ಶಾಕ್ ನೀಡಿದ್ದು, ಕೊರೊನಿಲ್ ಟ್ರೇಡ್ ಮಾರ್ಕ್ ಬಳಕೆಗೆ ನಿರ್ಬಂಧ ಹೇರಿದೆ. ಕೊರೊನಾ ಕುರಿತ ಜನರ ಭಯವನ್ನು ಸಂಸ್ಥೆ ಬಂಡವಾಳವಾಗಿಸಿಕೊಂಡಿದೆ ಎಂದು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದ್ದು, ‘ಕೊರೊನಿಲ್’ ಹೆಸರು ಬಳಸಿಕೊಂಡು ಜನರ ದಿಕ್ಕು ತಪ್ಪಿಸಬಾರದು ಎಂದು ಹೇಳಿದೆ.