ಬಾಂಗ್ಲಾದೇಶ ತನ್ನ ಐವತ್ತನೆ ಸ್ವಾತಂತ್ರೋತ್ಸವ ಸಂಭ್ರಮದಲ್ಲಿದೆ. 1971 ರಲ್ಲಿ ಬಾಂಗ್ಲಾದೇಶ ಸ್ವತಂತ್ರಗೊಂಡಿದ್ದು, ಈ ವೇಳೆ ಸ್ವಾತಂತ್ರ್ಯದ ಹೋರಾಟದಲ್ಲಿ ಭಾರತೀಯ ಸೇನೆ ಮಹತ್ತರ ಪಾತ್ರ ವಹಿಸಿತ್ತು.
50 ನೆಯ ಸ್ವಾತಂತ್ರ್ಯ ಸಂಭ್ರಮದಲ್ಲಿರುವ ಬಾಂಗ್ಲಾದೇಶಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಭೇಟಿ ನೀಡಿದ್ದು, ಶುಕ್ರವಾರದಂದು ನಡೆದ ರಾಷ್ಟ್ರೀಯ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ್ದಾರೆ.
ಡಿ.ಕೆ. ಶಿವಕುಮಾರ್ ಗೆ ಒಳ್ಳೆಯದಾಗಲಿ: ರಮೇಶ ಜಾರಕಿಹೊಳಿ ಬಿಗ್ ಬಾಂಬ್
ಈ ವೇಳೆ ಬಾಂಗ್ಲಾ ವಿಮೋಚನೆಯ ಪರ ಹೋರಾಟದಲ್ಲಿ ತಾವೂ ಸಹ ಪಾಲ್ಗೊಂಡಿದ್ದ ಸಂಗತಿಯನ್ನು ಬಿಚ್ಚಿಟ್ಟಿರುವ ಪ್ರಧಾನಿ ನರೇಂದ್ರ ಮೋದಿ, ಅಂದು ಯುವಕನಾಗಿದ್ದ ನಾನು ಹೋರಾಟಗಾರರ ಜೊತೆ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಜೈಲು ಸೇರಿದ್ದೆ ಎಂಬುದನ್ನು ಸ್ಮರಿಸಿಕೊಂಡಿದ್ದಾರೆ.