ಕೊರೊನಾ ವೈರಸ್ ಹಿನ್ನಲೆಯಲ್ಲಿ ಶಾಲಾ-ಕಾಲೇಜುಗಳನ್ನು ಮುಚ್ಚಲಾಗಿದೆ. ಅನೇಕ ಶಾಲೆಗಳು ಆನ್ಲೈನ್ ಶಿಕ್ಷಣವನ್ನು ಶುರು ಮಾಡಿವೆ. ಆದ್ರೆ ಬಡ ಮಕ್ಕಳಿಗೆ ಆನ್ಲೈನ್ ಶಿಕ್ಷಣ ಸಾಧ್ಯವಾಗ್ತಿಲ್ಲ. ಅದಕ್ಕೆ ಬೇಕಾದ ಎಲ್ಲ ಸೌಲಭ್ಯ ಅವ್ರ ಬಳಿಯಿಲ್ಲ.
ಬಡ ಮಕ್ಕಳಿಗೆ ಕಂಪ್ಯೂಟರ್ ಖರೀದಿಸಲು ಸಾಧ್ಯವಾಗ್ತಿಲ್ಲ. ಹಾಗಾಗಿ ಅವರು ಶಿಕ್ಷಣದಿಂದ ವಂಚಿತರಾಗ್ತಿದ್ದಾರೆ. ಶಿಕ್ಷಣದಿಂದ ಮಕ್ಕಳು ವಂಚಿತರಾಗ್ಬಾರದು ಎನ್ನುವ ಕಾರಣಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಮಕ್ಕಳ ಸಹಾಯಕ್ಕೆ ಮುಂದಾಗಿದೆ. ಆರ್ ಎಸ್ ಎಸ್ ಬಡಮಕ್ಕಳಿಗೆ ಲ್ಯಾಪ್ ಟಾಪ್ ಸೇರಿದಂತೆ ಆನ್ಲೈನ್ ಶಿಕ್ಷಣಕ್ಕೆ ಬೇಕಾಗುವ ಸೌಲಭ್ಯ ನೀಡಲು ಮುಂದಾಗಿದೆ.
ಅಂಗ ಸಂಸ್ಥೆಗಳ ಜೊತೆ ಸೇರಿ ಬಡ ಮಕ್ಕಳನ್ನು ಗುರುತಿಸಿ ಅವ್ರಿಗೆ ಕಂಪ್ಯೂಟರ್ ನೀಡಲಿದೆ.