ವಾಹನ ಸವಾರರ ಅನುಕೂಲಕ್ಕೆ ಫಾಸ್ಟ್ ಟ್ಯಾಗ್ ವ್ಯವಸ್ಥೆ ಮಾಡಲಾಗಿದೆ. ಇದರಿಂದ ವಾಹನ ಸವಾರರು ಬಹು ಸಮಯದವರೆಗೆ ಕಾಯುವುದು ತಪ್ಪುತ್ತದೆ. ಹಾಗೆಯೇ ಟೋಲ್ ಪ್ಲಾಜಾಗಳಲ್ಲಿ ವಾಹನಗಳು ಹೆಚ್ಚು ಹೊತ್ತು ನಿಲ್ಲುವುದರಿಂದ ವಾಯು ಮಾಲಿನ್ಯ ಕೂಡ ಉಂಟಾಗುತ್ತಿತ್ತು. ಇದನ್ನು ತಪ್ಪಿಸೋದಿಕ್ಕೆ ಫಾಸ್ಟ್ ಟ್ಯಾಗ್ ಜಾರಿಗೆ ತರಲಾಗಿದೆ.
ಇದೀಗ ಫಾಸ್ಟ್ ಟ್ಯಾಗ್ ಬಳಕೆದಾರರ ಸಂಖ್ಯೆಯಲ್ಲಿ ಏರಿಕೆಯಾಗಿದೆಯಂತೆ. ಒಂದು ದಿನಕ್ಕೆ 2 ಕೋಟಿ ಮಂದಿ ಫಾಸ್ಟ್ ಟ್ಯಾಗ್ ಬಳಕೆ ಮಾಡುತ್ತಿದ್ದಾರೆ ಎನ್ನಲಾಗಿದೆ. 2 ಕೋಟಿ ಜನರಿಂದ ಪ್ರತಿದಿನ 93 ಕೋಟಿ ರೂಪಾಯಿ ಹಣ ಸಂಗ್ರಹವಾಗುತ್ತಿದೆಯಂತೆ.
ಕಳೆದ ವರ್ಷಕ್ಕಿಂತ ಈ ವರ್ಷ ಫಾಸ್ಟ್ ಟ್ಯಾಗ್ ಬಳಕೆ ಹೆಚ್ಚಾಗಿದೆ. ಈ ಫಾಸ್ಟ್ ಟ್ಯಾಗ್ ವ್ಯವಸ್ಥೆ ಟೋಲ್ ಸಿಬ್ಬಂದಿ ಅಷ್ಟೆ ಅಲ್ಲದೆ ವಾಹನ ಸವಾರರಿಗೂ ಯಾವುದೇ ಕಿರಿಕಿರಿ ಇಲ್ಲದೆ ಸಮಯ ಉಳಿಸಿಕೊಂಡು ಮುಂದೆ ಹೋಗಬಹುದಾಗಿದೆ.