ಕೊರೊನಾದಿಂದಾಗಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಆದರೆ ಅನ್‌ಲಾಕ್ ಪ್ರಕ್ರಿಯೆ ಪ್ರಾರಂಭವಾದಂತೆ ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಬಸ್ ಸಂಚಾರ ಸೇರಿದಂತೆ ಹಲವು ಸೇವೆಗಳನ್ನು ಪುನರಾರಂಭಿಸಲಾಗಿದೆ. ಇದೀಗ ಹಬ್ಬ ಹರಿದಿನಗಳಲ್ಲಿ ಪ್ರಯಾಣಿಕರಿಗೆ ಅನುಕೂಲ ಆಗಲಿ ಅಂತ ಹೆಚ್ಚುವರಿ ರೈಲುಗಳನ್ನು ಬಿಡಲಾಗುತ್ತಿದೆ.
ಈ ಹಿಂದೆ ಒಟ್ಟು 200 ರೈಲುಗಳನ್ನು ಬಿಡೋದಿಕ್ಕೆ ರೈಲ್ವೇ ಇಲಾಖೆ ಒಪ್ಪಿಕೊಂಡಿತ್ತು. ಅದರ ಮೊದಲ ಭಾಗವಾಗಿ ಒಟ್ಟು 39 ವಿಶೇಷ ರೈಲುಗಳನ್ನು ಬಿಡಲು ಸಮ್ಮತಿ ಸೂಚಿಸಿದೆ. ಅಕ್ಟೋಬರ್ 15 ರಿಂದ ಈ ವಿಶೇಷ ರೈಲುಗಳು ಕಾರ್ಯನಿರ್ವಹಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಈ ವಿಶೇಷ ರೈಲುಗಳು, ದೇಶದೆಲ್ಲೆಡೆ ಸಂಚಾರ ಮಾಡಲಿದ್ದು, ಇದರಲ್ಲಿ ಬಹುತೇಕ ರೈಲುಗಳು ಎಕ್ಸ್‌ಪ್ರೆಸ್ ರೈಲುಗಳು. ಇನ್ನು ಕರ್ನಾಟಕದಲ್ಲಿ 5 ವಿಶೇಷ ರೈಲುಗಳನ್ನು ಬಿಡಲಾಗಿದೆ. ಈ ರೈಲುಗಳಲ್ಲಿ ಮೂರು ವಾರಕ್ಕೊಮ್ಮೆ ಸಂಚಾರ ಮಾಡಿದರೆ, ಚೆನ್ನೈ-ಬೆಂಗಳೂರು ಡಬಲ್ ಡೆಕ್ಕರ್ ಪ್ರತಿದಿನ ಸಂಚಾರ ಮಾಡಲಿದೆ. ಬೆಂಗಳೂರು-ಚೆನ್ನೈ ಶತಾಬ್ದಿ ಎಕ್ಸ್‌ಪ್ರೆಸ್ ಮಂಗಳವಾರ ಹೊರತುಪಡಿಸಿ ಉಳಿದ ದಿನ ಸಂಚರಿಸಲಿದೆ.