ಕೋಲ್ಕತ್ತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿಯಾಗಿ 3ನೇ ಬಾರಿ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ ಸಿಎಂ ಮಮತಾ ಬ್ಯಾನರ್ಜಿ, ಕೊರೊನಾ ಸೋಂಕು ನಿಯಂತ್ರಣಕ್ಕೆ ರಾಜ್ಯದಲ್ಲಿ ಖಡಕ್ ರೂಲ್ಸ್ ಜಾರಿ ಮಾಡಿದ್ದು ಸೆಮಿ ಲಾಕ್ ಡೌನ್ ಘೋಷಣೆ ಮಾಡಿದ್ದಾರೆ.
ಲಾಕ್ ಡೌನ್ ಜಾರಿ ಬಗ್ಗೆ ಇಂದು ಕೇಂದ್ರ ಸರ್ಕಾರದಿಂದ ಅಧಿಕೃತ ಸೂಚನೆ ಹೊರ ಬೀಳುವ ಸಾಧ್ಯತೆ ಇದ್ದು, ಇದಕ್ಕೂ ಮುನ್ನವೇ ಸಿಎಂ ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳದಲ್ಲಿ ಸೆಮಿ ಲಾಕ್ ಡೌನ್ ಘೋಷಿಸಿದ್ದಾರೆ. ಪ್ರಮಾಣವಚನ ಸ್ವೀಕರಿಸಿದ ಕೆಲವೇ ಸಮಯದಲ್ಲಿ ಸುದ್ದಿಗೋಷ್ಠಿ ನಡೆಸಿದ ದೀದಿ, ನಾಳೆಯಿಂದ ರಾಜ್ಯದಲ್ಲಿ ಟಫ್ ರೂಲ್ಸ್ ಜಾರಿ ಬರಲಿದ್ದು, ಸ್ಥಳೀಯ ರೈಲು ಸಂಚಾರ ಕೂಡ ಬಂದ್ ಆಗಲಿದೆ ಎಂದಿದ್ದಾರೆ.
ಇಂಥ ಮುಖ್ಯಮಂತ್ರಿಗಳನ್ನು ಕಟ್ಟಿಕೊಂಡು ಏನು ಮಾಡಲು ಸಾಧ್ಯ…? BSY ವಿರುದ್ಧ ಮತ್ತೆ ಗುಡುಗಿದ ಹೆಚ್.ವಿಶ್ವನಾಥ್
ಅಗತ್ಯ ಸೇವೆ, ಮೆಡಿಕಲ್ ಶಾಪ್ ಹೊರತುಪಡಿಸಿ ಸಭೆ ಸಮಾರಂಭಗಳು, ಬಾರ್ ರೆಸ್ಟೋರೆಂಟ್, ಬ್ಯೂಟಿ ಪಾರ್ಲರ್, ಜಿಮ್, ಮಾಲ್, ಥಿಯೇಟರ್ ಸೇರಿದಂತೆ ಎಲ್ಲ ಸೇವೆಗಳಿಗೆ ನಿರ್ಬಂಧ ವಿಧಿಸಲಾಗಿದೆ. ಬ್ಯಾಂಕಿಂಗ್ ಸೇವೆಗೆ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಮಾತ್ರ ಅವಕಾಶ ನೀಡಲಾಗಿದ್ದು, ಹೋಟೆಲ್ ಗಳಿಗೆ ಆನ್ ಲೈನ್ ಆರ್ಡರ್ ಹಾಗೂ ಹೋಂ ಡಿಲೆವರಿಗೆ ಮಾತ್ರ ಅವಕಾಶ ನೀಡಲಾಗಿದೆ. ರಾಜ್ಯಕ್ಕೆ ಹೊರಗಿನಿಂದ ಬರುವವರಿಗೆ ಆರ್ ಟಿಪಿಸಿಆರ್ ಟೆಸ್ಟ್ ಕಡ್ಡಾಯವಾಗಿದೆ.