ಪ್ರಧಾನಿ ನರೇಂದ್ರ ಮೋದಿಯವರು 2015 ರಿಂದ ಇಲ್ಲಿಯವರೆಗೆ ಒಟ್ಟು 58 ದೇಶಗಳಿಗೆ ಭೇಟಿ ನೀಡಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಹಾಯಕ ಸಚಿವ ವಿ. ಮುರಳಿಧರನ್ ರಾಜ್ಯಸಭೆಗೆ ನೀಡಿರುವ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಇದಕ್ಕಾಗಿ ಒಟ್ಟು 517.82 ಕೋಟಿ ರೂಪಾಯಿ ವೆಚ್ಚವಾಗಿದೆ ಎಂದು ಸಚಿವರು ತಿಳಿಸಿದ್ದು, ಕೆಲವು ಬಾರಿ ಒಂದೇ ಪ್ರವಾಸದಲ್ಲಿ ಹಲವು ರಾಷ್ಟ್ರಗಳಿಗೆ ಪ್ರಧಾನಿಯವರು ಭೇಟಿ ನೀಡಿದ್ದಾರೆ ಎಂದು ಹೇಳಿದ್ದಾರೆ.
ಅಮೆರಿಕಾ, ಚೀನಾ, ರಷ್ಯಾಗೆ ಐದು ಬಾರಿ ಸೇರಿದಂತೆ ಸಿಂಗಾಪುರ, ಜರ್ಮನಿ, ಫ್ರಾನ್ಸ್, ಶ್ರೀಲಂಕಾ, ಯುಎಇ, ನೇಪಾಳ ಮೊದಲಾದ ರಾಷ್ಟ್ರಗಳಿಗೆ ಪ್ರಧಾನಿಯವರು ಭೇಟಿ ನೀಡಿದ್ದು, 2019 ರ ನವೆಂಬರ್ ನಲ್ಲಿ ಬ್ರೆಜಿಲ್ ನಲ್ಲಿ ನಡೆದ ಬ್ರಿಕ್ಸ್ ಶೃಂಗ ಸಭೆಯಲ್ಲಿ ಕೊನೆಯದಾಗಿ ಭಾಗವಹಿಸಿದ್ದರು ಎಂದು ಮಾಹಿತಿ ನೀಡಲಾಗಿದೆ.