ಮುಸ್ಲಿಂ ಯುವಕನೊಬ್ಬ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಮಾತನಾಡುತ್ತಿರುವ ಫೋಟೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅವರ ಕಿವಿ ಬಳಿ ಪಿಸುಮಾತಿನಲ್ಲಿ ಯುವಕ ಮಾತನಾಡುತ್ತಿರುವ ದೃಶ್ಯ ಇದಾಗಿದ್ದು, ಈ ಕುರಿತು ನಾನಾ ವ್ಯಾಖ್ಯಾನಗಳು ಹರಿದಾಡಿದ್ದವು.
ಈ ಫೋಟೋ ಕುರಿತು ತಮ್ಮದೇ ಆದ ರೀತಿಯಲ್ಲಿ ವ್ಯಾಖ್ಯಾನಿಸಿದ್ದ ಎಐಎಂಐಎಂ ಮುಖ್ಯಸ್ಥ ಅಸಾದುದ್ದಿನ್ ಓವೈಸಿ, ಬಹುಶಃ ಯುವಕ ಎನ್.ಆರ್.ಸಿ. ಮತ್ತು ಎನ್.ಪಿ.ಆರ್. ಗೆ ನಾನು ದಾಖಲೆ ತೋರಿಸುವುದಿಲ್ಲ ಹಾಗೂ ತ್ರಿವಳಿ ತಲಾಕ್ ಮಸೂದೆಗೆ ನನ್ನ ಬೆಂಬಲವಿಲ್ಲ ಎಂದು ಹೇಳಿರಬೇಕು ಎಂದಿದ್ದರು.
ಸಾರ್ವಜನಿಕರೇ ಗಮನಿಸಿ: ಇಂದಿನಿಂದ ಈ 7 ಜಿಲ್ಲೆಗಳ ಸರ್ಕಾರಿ ಕಚೇರಿ ಸಮಯ ಬದಲು
ಇದೀಗ ಸ್ವತಃ ಯುವಕನೇ ಅಂದು ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಹೇಳಿದ್ದೇನು ಎಂಬುದನ್ನು ಬಾಯ್ಬಿಟ್ಟಿದ್ದಾರೆ. ಬಿಜೆಪಿ ಕಾರ್ಯಕರ್ತರಾಗಿರುವ 38 ವರ್ಷದ ಜುಲ್ಫಿಕರ್ ಆಲಿ ಎಂಬ ಈ ಯುವಕ ‘ಏಪ್ರಿಲ್ 2ರಂದು ಚುನಾವಣಾ ಪ್ರಚಾರಕ್ಕಾಗಿ ಸೋನಾರ್ ಪುರ ಹೆಲಿಪ್ಯಾಡ್ ಗೆ ಮೋದಿಯವರು ಬಂದಿಳಿದ ವೇಳೆ ಅವರ ಬಳಿ ಪಿಸುಮಾತಿನಲ್ಲಿ ಒಂದು ಸೆಲ್ಫಿ ತೆಗೆದುಕೊಳ್ಳಬಹುದೇ ಎಂದು ನಾನು ಕೇಳಿದೆ. ಅದಕ್ಕೆ ಅವರು ಸಹ ಸಮ್ಮತಿಸಿದ್ದರು. ಆದರೆ ಅಂದು ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಸಾಧ್ಯವಾಗಲಿಲ್ಲ’ ಎಂದು ತಿಳಿಸಿದ್ದಾರೆ.