ಬಿಹಾರದ ಪಾಟ್ನಾದಲ್ಲಿ ಅಪರಾಧ ಪ್ರಕರಣವೊಂದು ಬೆಳಕಿಗೆ ಬಂದಿದೆ. ಪತಿಯ ಹಿಂಸೆಗೆ ಬೇಸತ್ತ ಪತ್ನಿ ಊರವರ ಜೊತೆ ಸೇರಿ ಪತಿಗೆ ಬುದ್ದಿ ಕಲಿಸಲು ಮುಂದಾಗಿದ್ದಾಳೆ. ಪತಿಯನ್ನು ಕರೆಂಟ್ ಕಂಬಕ್ಕೆ ಕಟ್ಟಿ ಹೊಡೆದಿದ್ದಾಳೆ.
ಘಟನೆ ಕತಿಹಾರ್ ಜಿಲ್ಲೆಯ ಜೈಪ್ರಕಾಶ್ ನಗರದಲ್ಲಿ ನಡೆದಿದೆ. ನೀತು ಎಂಬಾಕೆ ಮದುವೆ ಗಂಗಾ ಕುಮಾರ್ ಜೊತೆ ನಡೆದಿತ್ತು. ಇಬ್ಬರು ಪ್ರೀತಿಸಿ ಮದುವೆಯಾಗಿದ್ದರು.
ಮದುವೆಯ ನಂತರ ಇಬ್ಬರೂ ದೆಹಲಿಯಲ್ಲಿ ವಾಸವಾಗಿದ್ದರು. ಇವರಿಬ್ಬರು ಮದುವೆಯಾದ ವಿಷ್ಯ ಮನೆಯವರಿಗೆ ತಿಳಿದಿರಲಿಲ್ಲ. ಸಹೋದರಿ ಮನೆಯಲ್ಲಿದ್ದಾಳೆಂಬ ಕಾರಣ ಹೇಳಿ ಗಂಗಾ, ನೀತುಳನ್ನು ಮನೆಗೆ ಕರೆದುಕೊಂಡು ಹೋಗಿರಲಿಲ್ಲ. ನೀತುಗೆ ಗಂಗಾ ಪತ್ರಿ ದಿನ ಹಿಂಸೆ ನೀಡ್ತಿದ್ದನಂತೆ. ಮನಸ್ಸಿಗೆ ಬಂದಂತೆ ಥಳಿಸುತ್ತಿದ್ದನಂತೆ. ಕೆಲ ದಿನಗಳ ನಂತ್ರ ನೀತಾಳನ್ನು ಗಂಗಾ ಬಿಟ್ಟು ಹೋಗಿದ್ದ. ನೀತಾ ದೆಹಲಿಯಿಂದ ಕತಿಹಾರ್ನಲ್ಲಿರುವ ತನ್ನ ಮನೆಗೆ ಬಂದು ವಿಷ್ಯ ತಿಳಿಸಿದ್ದಳು.
ಗಂಗಾ ಹಿಂತಿರುಗಿ ಬರುವುದನ್ನೇ ಮನೆಯವರು ಕಾದಿದ್ದರು. ಗಂಗಾ ಬಂದ ನಂತ್ರ ಆತನನ್ನು ಕರೆಂಟ್ ಕಂಬಕ್ಕೆ ಕಟ್ಟಿ ಹಾಕಿ ಹೊಡೆದಿದ್ದಾರೆ. ನೀತು ಕೂಡ ಪೊರಕೆ ಸೇವೆ ಮಾಡಿದ್ದಾಳೆ. ನಂತ್ರ ಬುದ್ದಿ ಕಲಿತ ಗಂಗಾ ಪತ್ನಿ ಜೊತೆಗಿರಲು ಒಪ್ಪಿದ್ದಾನೆ.