alex Certify ರಾಷ್ಟ್ರ ರಾಜಧಾನಿಯಲ್ಲಿ ಡಿಸೇಲ್ ಜನರೇಟರ್ ಬಳಕೆ ಇಂದಿನಿಂದ ಬಂದ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಷ್ಟ್ರ ರಾಜಧಾನಿಯಲ್ಲಿ ಡಿಸೇಲ್ ಜನರೇಟರ್ ಬಳಕೆ ಇಂದಿನಿಂದ ಬಂದ್

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಾಲಿನ್ಯ ನಿಯಂತ್ರಣಕ್ಕೆ ಕೇಜ್ರಿವಾಲ್ ಸರ್ಕಾರ ಇನ್ನಿಲ್ಲದ ಪ್ರಯತ್ನ ನಡೆಸುತ್ತಿದೆ. ಕಟ್ಟಡ ನಿರ್ಮಾಣದ ಕೆಲ ನಿಯಮಗಳಲ್ಲಿ ದೊಡ್ಡ ಬದಲಾವಣೆ ಮಾಡಿದ ನಂತ್ರ ಕೇಜ್ರಿವಾಲ್ ಸರ್ಕಾರ ಈಗ ಜನರೇಟರ್ ಮೇಲೆ ಕ್ರಮಕೈಗೊಂಡಿದೆ. ನಿರ್ಮಾಣ ಕಾರ್ಯದ ವೇಳೆ ಡೀಸೆಲ್, ಪೆಟ್ರೋಲ್, ಸೀಮೆಎಣ್ಣೆಯಿಂದ ಚಲಿಸುವ ಜನರೇಟರ್ ಸೆಟ್ ಗಳನ್ನು ಬಳಸುವಂತಿಲ್ಲ. ಅವುಗಳ ಬಳಕೆ ಮೇಲೆ ಸರ್ಕಾರ ನಿಷೇಧ ಹೇರಿದೆ.

ಪರಿಸರ ಸಚಿವ ಗೋಪಾಲ್ ರಾಯ್ ಟ್ವೀಟ್ ಮಾಡುವ ಮೂಲಕ ಈ ವಿಷ್ಯವನ್ನು ತಿಳಿಸಿದ್ದಾರೆ. ಹೆಚ್ಚುತ್ತಿರುವ ಮಾಲಿನ್ಯ ಮಟ್ಟವನ್ನು ತಡೆಗಟ್ಟಲು ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ಅವರು ಹೇಳಿದ್ದಾರೆ. ಸಣ್ಣ ಹಾಗೂ ದೊಡ್ಡ ಸೈಟ್ ಗಳಲ್ಲಿ 5 ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿರುತ್ತದೆ ಎಂದವರು ಹೇಳಿದ್ದಾರೆ. ಚಳಿಗಾಲದ ಸಮಯದಲ್ಲಿ ಮಾಲಿನ್ಯ ಹೆಚ್ಚಾಗುತ್ತದೆ. ಅಕ್ಟೋಬರ್ ಆರಂಭದಲ್ಲಿಯೇ ಉಸಿರಾಡುವುದು ಕಷ್ಟಕರವಾಗುತ್ತದೆ. ಅದನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಮುನ್ನೆಚ್ಚರಿಕೆ ಕ್ರಮಕೈಗೊಂಡಿದೆ.

ಧೂಳು ಕಡಿಮೆ ಮಾಡಲು ಧೂಳು ವಿರೋಧಿ ಅಭಿಯಾನ ಶುರುವಾಗಿದೆ, ದೆಹಲಿಯಲ್ಲಿ 14 ತಂಡಗಳು ವಿವಿಧ ಪ್ರದೇಶಗಳಲ್ಲಿ ಧೂಳಿನ ಮಾನದಂಡಗಳನ್ನು ಉಲ್ಲಂಘಿಸುವವರ ವಿರುದ್ಧ ಕ್ರಮಕೈಗೊಳ್ಳುತ್ತಿವೆ. ಸರ್ಕಾರವಿರಲಿ, ಖಾಸಗಿಯಿರಲಿ ಕಟ್ಟಡ ನಿರ್ಮಾಣದ ವೇಳೆ ಸರ್ಕಾರದ ನಿಯಮ ಪಾಲನೆ ಕಡ್ಡಾಯವೆಂದು ಗೋಪಾಲ್ ರಾಯ್ ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...